ನವಲಗುಂದ: ಸಂಭ್ರಮಕ್ಕೆ ಹಿರಿಯರು, ಕಿರಿಯರು, ಯುವಕರು ಎಂಬ ಭೇದ ಭಾವ ಇಲ್ಲ ಎಂಬುದಕ್ಕೆ ಈ ದೃಶ್ಯಗಳೇ ಸಾಕ್ಷಿ. ಬಗಾಟ ಬಗರಿ, ಗೊರವ ಕುಣಿತದ ತಾಳಕ್ಕೆ ಯುವಜನತೆಯೇ ನಾಚುವಂತೆ ಅಜ್ಜಿ ಸಖತ್ ಸ್ಟೆಪ್ ಹಾಕಿದ್ದು, ಈಗ ಗ್ರಾಮಸ್ಥರು ಹುಬ್ಬೆರಿಸುವತೆ ಮಾಡಿದೆ.
ಹೌದು. ಗೌರಿ ಹುಣ್ಣಿಮೆ ಪ್ರಯುಕ್ತವಾಗಿ ಹಲವು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಸಂಪ್ರದಾಯದ ಪ್ರಕಾರ ಗುರುವಾರ ರಾತ್ರಿ ನವಲಗುಂದ ತಾಲ್ಲೂಕಿನ ಅಳಗವಾಡಿ ಗ್ರಾಮದ ವಾಲ್ಮೀಕಿ ಓಣಿಯ ದುರ್ಗಾದೇವಿ ಗುಡಿ ಎದುರು ಸೊಬಾನ ಪದ ಹಾಡಿ, ಬಗಾಟ ಬಗರಿ, ಗೊರವ ಕುಣಿತದಲ್ಲಿ ಅಜ್ಜಿ ಸೇರಿದಂತೆ ಮಹಿಳೆಯರು, ಮಕ್ಕಳು ಕುಣಿದು ಕುಪ್ಪಳಿಸಿ, ಸಂತಸ ಪಟ್ಟರು.
Kshetra Samachara
19/11/2021 12:45 pm