ನರಗುಂದ : ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನ ಅರಿಶಿನ ಗೋಡೆ ಎಂಬಲ್ಲಿ ಶ್ರೀ ದ್ಯಾಮಮ್ಮ ದೇವಿ ಹಾಗೂ ಶ್ರೀ ದುರ್ಗಾ ದೇವಿ ಜಾತ್ರಾ ಮಹೋತ್ಸವ ಕಮಿಟಿ ವತಿಯಿಂದ ಹಾಗೂ ಡಾ. ಬಿಆರ್ ಅಂಬೇಡ್ಕರ್ ಯುವಕ ಮಂಡಲ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ದ್ಯಾಮಮ್ಮ ದೇವಿ ಹಾಗೂ ಶ್ರೀ ದುರ್ಗಾ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಟಗರಿನ ಕಾಳಗವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂಧರ್ಭದಲ್ಲಿ ಟಗರಿನ ಕಾಲಗ ವೀಕ್ಷಿಸಲು ಅಕ್ಕಪಕ್ಕದ ಗ್ರಾಮಸ್ಥರು ಸಾಗರೋಪಾದಿಯಲ್ಲಿ ಬಂದಿದ್ದು, ಟಗರಿನ ಜಿದ್ದಾ ಜಿದ್ದನ್ನು ಕಂಡು ಕೇಕೆ ಹಾಕಿ ಹುರಿದುಂಬಿಸಿ ಸಂತಸ ಪಟ್ಟರು.
Kshetra Samachara
11/11/2021 07:29 pm