ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ : ಬೆಣಚಿ ಕೆರೆಗೆ ಬಾಗಿನ ಅರ್ಪಣೆ

ಕಲಘಟಗಿ: ತಾಲೂಕಿನ ಬೆಣಚಿಕೆರೆ ಮುಂಗಾರಿನ ಮಳೆಗೆ ತುಂಬಿದ್ದು, ಪಟ್ಟಣ ಪಂಚಾಯತಿಯಿಂದ ಕೆರೆಗೆ ಪೂಜೆ ಸಲ್ಲಿಸಿ ಬಾಗಿನವನ್ನು ಶಾಸಕ ಸಿ ಎಂ ನಿಂಬಣ್ಣವರ ಅರ್ಪಿಸಿದರು. ಕಲಘಟಗಿ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆಗೆ ಬೆಣಚಿ ಕೆರೆಯ ನೀರನ್ನು ಬಳಸಿಕೊಳ್ಳಲಾಗುತ್ತಿದ್ದು,ಈ ಬಾರಿ ಮತ್ತೆ ಕೆರೆ ತುಂಬಿದ್ದು ನೀರಿನ ಸಮಸ್ಯೆ ಇಲ್ಲದಂತಾಗಿದ್ದು,ಕೆರೆಗೆ ಬಾಗಿನ ಅರ್ಪಿಸಲಾಯಿತು.

ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷರಾದ ಅನಸೂಯಾ ಹೆಬ್ಬಳ್ಳಿಮಠ,ಉಪಾಧ್ಯಕ್ಷರಾದ ಯಲ್ಲವ್ವ ಶಿಗ್ಲಿ, ಮುಖ್ಯಾಧಿಕಾರಿ ವಾಯ್ ಜಿ ಗದ್ದಿಗೌಡರ,ವಲಯ ಅರಣ್ಯಾಧಿಕಾರಿ ಶ್ರೀಕಾಂತ್ ಪಾಟೀಲ ಹಾಗೂ ಪಪಂ ಸದಸ್ಯರು ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

09/08/2021 07:16 pm

Cinque Terre

18.06 K

Cinque Terre

0

ಸಂಬಂಧಿತ ಸುದ್ದಿ