ನವಲಗುಂದ : ಪಟ್ಟಣದ ಸಂಕವ್ವನ ಬಾವಿ ಆವರಣದಲ್ಲಿ ಶ್ರೀಪೂರ್ಣ ಫೌಂಡೇಶನ್ ವತಿಯಿಂದ ಬಾವಿಯ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಪುರಸಭೆ ಅಧ್ಯಕ್ಷರಾದ ಮಂಜುನಾಥ ಜಾಧವ ಹಾಗೂ ವಕೀಲರಾದ ಶ್ಯಾಮಸುಂದರ ಡಂಬಳ ಮಾಡಿದರು.
ಹೌದು ಶ್ರೀಪೂರ್ಣ ಫೌಂಡೇಶನ್ ನವಲಗುಂದ ವತಿಯಿಂದ ಶ್ರಮದಾನ ಮಾಡಲಾಗಿದ್ದು, ಶ್ರೀಪೂರ್ಣ ಫೌಂಡೇಶನ್ ಉದ್ಘಾಟನೆ ಕಾರ್ಯಕ್ರಮವನ್ನು ಸಹ ಇದೆ ವೇಳೆ ನೆರವೇರಿಸಲಾಯಿತು. ಅಷ್ಟೇ ಅಲ್ಲದೆ ಇದೆ ಸಂಧರ್ಭದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮ ದಿನಾಚರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಲಾಯಿತು.
Kshetra Samachara
23/01/2022 06:03 pm