ನವಲಗುಂದ : ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಪಟ್ಟಣದ ಕಾಂಗ್ರೆಸ್ ಜನಸಂಪರ್ಕ ಕಚೇರಿಯಲ್ಲಿ ಪೌರ ಕಾರ್ಮಿಕರಿಗೆ ನವಲಗುಂದ ಮಾಜಿ ಶಾಸಕ ಎನ್.ಹೆಚ್ ಕೋನರಡ್ಡಿ ಹಾಗೂ ಧಾರವಾಡ ಜಿಲ್ಲಾ ಗ್ರಾಮೀಣ ಯುವ ಘಟಕದ ಅಧ್ಯಕ್ಷ ವಿನೋದ ಅಸೂಟಿ ಅವರಿಂದ ಸನ್ಮಾನಿಸಲಾಯಿತು.
ಮೊದಲು ಕೇಕ್ ಕತ್ತರಿಸಿ, ಶುಭಾಶಯ ಕೋರಿದ ಅವರು ನಂತರ ಪೌರ ಕಾರ್ಮಿಕರಾದ ರೇಣುಕಾ ಹುಣಸಿಮರದ, ದ್ಯಾಮವ್ವ ಹುಣಸಿಮರದ, ನಾಗವ್ವ ವಸರಣ್ಣವರ, ದುರಗವ್ವ ಹುಣಸಿಮರದ, ರೇಣುಕಾ ಹುಣಸಿಮರದ ಅವರಿಗೆ ಶಾಲು ಹೊಚ್ಚಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ನವಲಗುಂದ ಪುರಸಭೆ ಅಧ್ಯಕ್ಷ ಮಂಜುನಾಥ ಜಾಧವ, ಸದಸ್ಯರುಗಳಾದ ಜೀವನ ಪವಾರ, ಶಿವಾನಂದ ತಡಸಿ, ಮೋದಿನ ಶಿರೂರ, ಸುರೇಶ ಮೇಟಿ, ಹನಮಂತ ವಾಲಿಕಾರ, ಮಾಂತೇಶ ಭೋವಿ, ಹುಸೇನಬಿ ಧಾರವಾಡ, ಮಹಿಳಾ ಮುಖಂಡರಾದ ನಂದಿನಿ ಹಾದಿಮನಿ, ನೂರಜಾನ ದಾವಲತ್ತಾರ, ಸುನಂದಾ ಬಂಡಿವಡ್ಡರ, ರಮೇಶ ನವಲಗುಂದ, ಮೈಲಾರಿ ವೈದ್ಯ, ರಾಜು ದೊಡಮನಿ, ಸುಲೆಮಾನ ನಾಶಿಪುಡಿ ಮುಂತಾದವರು ಇದ್ದರು.
Kshetra Samachara
08/03/2022 07:13 pm