ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಹುತಾತ್ಮ ಯೋಧನ ಕಂಚಿನ ಪುತ್ಥಳಿ ನಿರ್ಮಿಸಿದ ಸಹೋದರ-ನಾಳೆ ಲೋಕಾರ್ಪಣೆ

ಅಣ್ಣಿಗೇರಿ: 2016 ರಲ್ಲಿ ಕಾಶ್ಮೀರದ ಲೇಹ ಲಡಾಕ್ ನಲ್ಲಿ ನಡೆದ ಸೇನಾ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ತಾಲೂಕಿನ ಸೈದಾಪುರ ಗ್ರಾಮದಲ್ಲಿ ಹಸನ್ ಸಾಬ್ ಖುದಾವಂದ ಅವರ ಕಂಚಿನ ಪುತ್ಥಳಿಯನ್ನು ಲೋಕಾರ್ಪಣೆ ಕಾರ್ಯಕ್ರಮ ಫೆಬ್ರುವರಿ 27 ರಂದು ನಾಳೆ ಸೈದಾಪುರ ಗ್ರಾಮದಲ್ಲಿ ಜರುಗುತ್ತಿದೆ.

ಇನ್ನೂ ಹುತಾತ್ಮ ವೀರಯೋಧನ ಕಂಚಿನ ಪುತ್ಥಳಿ ನಿರ್ಮಿಸಲು ಸರಕಾರದಿಂದ ಯಾವುದೇ ಸಹಾಯ ದೊರಕಿರುವುದಿಲ್ಲ. ಹಸನಸಾಬ ಖುದಾವಂದ ಕುಟುಂಬದವರಿಂದಲೇ ಸುಮಾರು 4 ರಿಂದ 5 ಲಕ್ಷ ದಲ್ಲಿ ವೆಚ್ಚದಲ್ಲಿ ಕಂಚಿನ ಪುತ್ಥಳಿಯನ್ನು ರೆಡಿ ಮಾಡಿಸಲಾಗಿದೆ.

ವೀರಯೋಧ ಹುತಾತ್ಮರಾದ ಸಂದರ್ಭದಲ್ಲಿ ಆಗಿನ ಜಿಲ್ಲಾಡಳಿತ ಹಲವಾರು ಭರವಸೆಗಳನ್ನು ನೀಡಿತ್ತು. ಆದರೆ ಯಾವುದೇ ತರದ ಸಹಾಯ ದೊರಕಿರುವುದಿಲ್ಲ ಎಂದು ಸಹೋದರ ಮೈಬೂಬ್ ಸಾಬ್ ಖುದಾವಂದ ಅವರು ಪಬ್ಲಿಕ್ ನೆಕ್ಸ್ಟ್ ಗೆ ತಿಳಿಸಿದರು.

Edited By : Nagesh Gaonkar
Kshetra Samachara

Kshetra Samachara

26/02/2022 07:08 pm

Cinque Terre

29.37 K

Cinque Terre

6

ಸಂಬಂಧಿತ ಸುದ್ದಿ