ಹುಬ್ಬಳ್ಳಿ: ಬಲ್ಲವನೇ ಬಲ್ಲ ಬೆಲ್ಲದ ರುಚಿಯ ಎನ್ನುವ ಹಾಗೆ ಕಲೆಯ ಸವಿಯು ಸವಿದವನಿಗೆ ಗೊತ್ತು. ಮಾನವನ ವಿಶಿಷ್ಟ ಚಟುವಟಿಕೆಯೇ ಕಲೆ ಎಂದೆನ್ನಬಹುದು. ಕಲೆ ಯಾರೊಬ್ಬರ ಸ್ವತ್ತು ಅಲ್ಲ ಎಂಬುದಕ್ಕೆ ಪುರಾವಯೇ ಹುಬ್ಬಳ್ಳಿಯ ಪ್ರತಿಭೆ ದಿನೇಶ್ ಚಿಲ್ಲಾಳ.
ಹೌದು... ಹುಬ್ಬಳ್ಳಿಯ ಕಲೆಗಾರ ದಿನೇಶ್ ಕಳೆದ 26 ವರ್ಷಗಳಿಂದ ತಮ್ಮ ಜೀವನವನ್ನು ಕಲೆಗೆ ಸಮರ್ಪಿಸಿದ್ದಾರೆ. ರೇಖಾಚಿತ್ರ, ಜಲವರ್ಣ, ತೈಲವರ್ಣ, ಅಕ್ರಾಲಿಕ್ ಕಾಗದ ಮತ್ತು ಕ್ಯಾನ್ ವಾಸ್ ಗಳ ಮೇಲೆ ಚಿತ್ರ ರಚನೆಯಲ್ಲಿ ಸಿದ್ದಹಸ್ತರಾಗಿದ್ದಾರೆ. ಅಷ್ಟೇ ಅಲ್ಲದೇ ಕಳೆದ 11 ವರ್ಷಗಳಿಂದ ರಂಗೋಲಿ ಭಾವಚಿತ್ರ ರಚನೆಯಲ್ಲಿಯೂ ಸಹ ಪರಿಣಿತಿಯನ್ನು ಪಡೆದುಕೊಂಡಿದ್ದಾರೆ. ಸಾಂಪ್ರದಾಯಿಕ, ಅಲಂಕಾರಿಕ ಹಾಗೂ ಭಾವಚಿತ್ರ ಬಿಡಿಸುವದರಲ್ಲಿ ಹೆಚ್ಚಿನ ಕುಶಲತೆ ಹೊಂದಿರುವ ದಿನೇಶ್. ನಮ್ಮ ನಡುವಿನ ಹೆಮ್ಮೆಯ ಕಲೆಗಾರ ಎಂದೇ ಹೇಳಬಹುದು.
ಇಷ್ಟು ಸುದೀರ್ಘ ವರ್ಷಗಳಲ್ಲಿ ಈಗಾಗಲೇ ಹಲವಾರು ಆರ್ಟ್ ಕ್ಯಾಂಪ್, ಸೋಲೋ ಶೋ ಹಾಗೂ ಗ್ರೂಪ್ ಶೋ ಗಳಲ್ಲಿ ಭಾಗವಹಿಸಿದ್ದಾರೆ. ಅಲ್ಲದೇ ಹುಬ್ಬಳ್ಳಿಯ ಪ್ರಸಿದ್ಧ ಶ್ರೀ ಸಿದ್ಧಾರೂಢ ಸ್ವಾಮಿಗಳು, ಸ್ವಾತಂತ್ರ್ಯ ಹೋರಾಟಗಾರರು ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಯೋಜಿಸಿರುವ ಮನ್ ಕಿ ಬಾತ್ ನಲ್ಲಿ ಭಾರತದ ಸಂಸ್ಕೃತಿ, ಭಾರತದ ಸಾಧನೆಗಳನ್ನು ಬಿಂಬಿಸುವ ಸುಂದರವಾದ ರಂಗೋಲಿಗಳನ್ನು ಬಿಡಿಸುವ ಮೂಲಕ ತಮ್ಮ ಪ್ರತಿಭೆಯನ್ನು ಸಮಾಜದ ಮುಂದಿಟ್ಟಿದ್ದಾರೆ ದಿನೇಶ್ ಚಿಲ್ಲಾಳ್.
ನಮ್ಮ ಹೆಮ್ಮೆಯ ಹುಬ್ಬಳ್ಳಿಯ ಪ್ರತಿಭೆಯ ಸಾಧನೆ ಇಡೀ ದೇಶದ ತುಂಬೆಲ್ಲಾ ಹಬ್ಬಲಿ ಹಾಗೂ ರಾರಾಜಿಸಲಿ ಎಂಬುದೇ ನಿಮ್ಮ ಪಬ್ಲಿಕ್ ನೆಕ್ಸ್ಟ್ ಆಶಯ.
Kshetra Samachara
05/02/2022 02:51 pm