ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಹಾನವಮಿ ಹಬ್ಬಕ್ಕೆ ಬಾರಣ್ಣ ಕರಿಯಾಕ: ಉತ್ತರ ಕರ್ನಾಟಕ ಕಲಾವಿದನ ವಿನೂತನ ಪ್ರಯೋಗ

ವರದಿ: ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

ಹುಬ್ಬಳ್ಳಿ: ದಸರಾ ಹಬ್ಬ ಬಂತು ಅಂದರೆ ನಮ್ಮ ಹಳ್ಳಿ ಒಳಗೆ ಒಂದಿಲ್ಲೊಂದು ರೀತಿಯಲ್ಲಿ ಉತ್ಸಾಹದ ಗರಿ ಚಿಗುರೊಡೆಯುವುದು ಖಂಡಿತ. ಇನ್ನೂ ಗಂಡನ ಮನೆಗೆ ಹೋದ ಮಹಿಳೆಯರಿಗಂತೂ ತವರು ಮನೆಗೆ ಬರುವ ಉತ್ಸಾಹವಂತೂ ಹೇಳ ತೀರದು. ಇಂತಹ ಮಹಿಳೆಯ ಭಾವನೆಗಳನ್ನು ಬಿಚ್ಚಿಡುವ ಪ್ರಯತ್ನವೊಂದನ್ನು ಕಲಾವಿದರು ಮಾಡಿದ್ದಾರೆ.

ಹೌದು..ಮಹಾನವಮಿ ಹಬ್ಬಕ್ಕ ಬಾರಣ್ಣ ಕರಿಯಾಕ ಎಂಬುವಂತ ಜಾನಪದ ಶೈಲಿಯ ಹಾಡನ್ನು ಉತ್ತರ ಕರ್ನಾಟಕದ ಹೆಮ್ಮೆಯ ಕಲಾವಿದ ಬಸವರಾಜ ಗುದ್ದಿನ ಸಂಗೀತ ಪ್ರೇಮಿಗಳಿಗೆ ಉಣಬಡಿಸಿದ್ದಾರೆ. ಮೂಲತಃ ಧಾರವಾಡ ಜಿಲ್ಲೆಯ ಕೋಳಿವಾಡ ಗ್ರಾಮದ ಶಿಕ್ಷಕ ಬಸವರಾಜ ಗುದ್ದಿನ ರಚಿಸಿದ ಮಹಾನವಮಿ ಹಬ್ಬಕ್ಕ ಬಾರಣ್ಣ ಕರಿಯಾಕ ಎಂಬುವಂತ ಹಾಡಿನ ಮೂಲಕ ಹೆಣ್ಣು ಮಗಳ ತವರ ಮನೆಯ ಆಸೆಯನ್ನು ಏಳೆ ಏಳೆಯಾಗಿ ಬಿಚ್ಚಿಟ್ಟಿದ್ದಾರೆ.

ಇನ್ನೂ ಈ ಹಾಡಿಗೆ ಬಾಲ ಕಲಾವಿದರಾದ ಬಸವರಾಜ ಪೂಜಾರ ಹಾಗೂ ಶಶಿಕಲಾ ತಿತ್ತಿ ಅಭಿನಯಿಸಿ ಹಾಡಿಗೆ ಧ್ವನಿ ನೀಡಿರುವುದು ನಿಜಕ್ಕೂ ಈ ಹಾಡಿಗೆ ಜೀವ ತುಂಬಿದಂತಾಗಿದೆ. ಪ್ರಾಥಮಿಕ ಶಾಲೆಯ ಶಿಕ್ಷಕರಾಗಿರುವ ಬಸವರಾಜ ಗುದ್ದಿನ ಸಾಕಷ್ಟು ಭಜನಾ ಪದ ಹಾಗೂ ಜಾನಪದ ಗೀತೆಗಳನ್ನು ರಚಿಸಿ ವಿನೂತನ ಡಿಜೆ ಸಾಂಗ್ ಸಂಯೋಜನೆ ಮೂಲಕ ಜನಮನ ಗೆದ್ದಿದ್ದಾರೆ.

ಮಹಾನವಮಿ ಹಬ್ಬದ ಬಗ್ಗೆ ತರುಣಿಯೊಬ್ಬಳ ಭಾವಸ್ಥಿತಿಯನ್ನು ವರ್ಣಿಸುವ ಅರ್ಥಪೂರ್ಣ ಗೀತೆಯನ್ನು ರಚಿಸಿದ್ದು,ಈಗಾಗಲೇ ಎಲ್ಲೆಡೆಯೂ ಪ್ರಶಂಸೆಗೆ ವ್ಯಕ್ತವಾಗಿದೆ.

Edited By : Nagesh Gaonkar
Kshetra Samachara

Kshetra Samachara

11/10/2021 04:44 pm

Cinque Terre

68.31 K

Cinque Terre

8

ಸಂಬಂಧಿತ ಸುದ್ದಿ