ಕುಂದಗೋಳ : ಪುರಾತನ ಕಾಲದ ಸಂಸ್ಕ್ರತಿ ಇತಿಹಾಸದ ಕುರುಹುಗಳು ಆಧುನಿಕ ಕಾಲದ ವಿಸ್ಮಯಗಳಾಗಿ ನಮಗೆ ಗೋಚರಿಸುತ್ತವೆ. ಅಂತಹ ಇತಿಹಾಸದ ದೇವಸ್ಥಾನವೊಂದು ವಿಶಿಷ್ಟತೆ ಮೂಲಕವೇ ಕುಂದಗೋಳ ತಾಲೂಕಿನ ಸಂಶಿ ಗ್ರಾಮದಲ್ಲಿ ಹೆಸರಾಗಿದೆ.
ಸಂಶಿ ಗ್ರಾಮದ ಶಂಕರಲಿಂಗೇಶ್ವರ ದೇವಸ್ಥಾನ ಚಾಲುಕ್ಯರ ಕಾಲದಲ್ಲಿ 11ನೇ ಶತಮಾನದಲ್ಲಿ ನಿರ್ಮಾಣವಾಗಿ "ಬ್ಯಾಸರಾಗಿ ಬಂದವರಿಗೆ ಆಸರೆಯಾಗುತ್ತ" ಇಡೀ ತಾಲೂಕಿನ ಸುತ್ತ ಮುತ್ತಲಿನ ಹಳ್ಳಿಗರ ಭಕ್ತರಿಗೆ ಆರಾಧ್ಯದೈವ ಈ ಶಂಕರಲಿಂಗ.
ದೇವಸ್ಥಾನದಲ್ಲಿನ ಕಂಬಗಳು ಒಂದಕ್ಕೊಂದು ವಿಧ ವಿಧದ ಕಲಾಕೃತಿ ಹೊಂದಿವೆ. ಶಂಕರಲಿಂಗೇಶ್ವರ ಸನ್ನಿಧಿಯಲ್ಲಿ ನಂದಿ ಚಕ್ರದ ಮೇಲೆ ಕುಳಿತಿದ್ದರೆ ಎಡ ಭಾಗದಲ್ಲಿ ಗಣೇಶ ಹಾಗೂ ಪಾದುಕೆ, ಅಷ್ಟದೇವತೆಗಳು ಇದ್ದರೆ ಬಲಭಾಗದಲ್ಲಿ ಚೌಡೇಶ್ವರಿ, ದುರ್ಗಾ ಪರಮೇಶ್ವರಿ ವಿಶಿಷ್ಟ ಕೆತ್ತನೆಗಳಿವೆ. ಈ ಶೈಲಿ ಅಪ್ಪಟ ಕಾಶಿ ವಿಶ್ವನಾಥನ ದೇವಸ್ಥಾನದ ಹೋಲಿಕೆಯಲ್ಲಿದೆ.
ಈ ಹಿಂದೆ ಹಾಳಾದ ಈ ದೇವಸ್ಥಾನ ಕಳೆದ 5 ವರ್ಷದಿಂದ ಜೀರ್ಣೋದ್ಧಾರ ಆಗಿದ್ದು, ಪ್ರತಿ ಎರೆಡು ವರ್ಷಕ್ಕೊಮ್ಮೆ ಪ್ರತಿ ವರ್ಷವು ಒಂದೇ ತಿಂಗಳ ಒಂದೇ ದಿನದಂದು ಸೂರ್ಯಕಿರಣ ಶಿವಲಿಂಗ ಸ್ಪರ್ಶ ಮಾಡುತ್ತದೆ. ಇನ್ನು ಪೂಜಾ ಕಾರ್ಯಕ್ರಮ ಇಷ್ಟಾರ್ಥಕ್ಕಾಗಿ ಶಿವಲಿಂಗ ಏಕ್ಕಿ ಹೂ ನೀಡಿದ ಪವಾಡ ಇಂದಿಗೂ ನಡೆಯುತ್ತದೆ. ಈ ಬಗ್ಗೆ ಅರ್ಚಕರ ಮಾತನ್ನ ಕೇಳಿ.
ದೇವಸ್ಥಾನ ಪಾಳುಬಿದ್ದ ಸಮಯದಲ್ಲಿ ಗೋಪುರ ಹಾಳಾಗಿದ್ದು, ಅಲ್ಲಿನ ಕಲಾಕೃತಿ ದೇವಸ್ಥಾನದ ಗೋಡೆಗಳಲ್ಲಿ ನೋಡಲು ಸಿಗುತ್ತವೆ. ಪ್ರತಿ ಸಂಕಷ್ಟ ದಿನ ದೇವಸ್ಥಾನದಲ್ಲಿ ವಿಶೇಷ ಪೂಜೆ ಎರ್ಪಡುತ್ತದೆ.
ಕುಂದಗೋಳ ಪಟ್ಟಣದ ಶಂಭೋಲಿಂಗೇಶ್ವರ ದೇವಸ್ಥಾನ , ಸಂಶಿ ಶಂಕರಲಿಂಗೇಶ್ವರ ದೇವಸ್ಥಾನ, ಲಕ್ಷ್ಮೇಶ್ವರದ ಸೋಮನಾಥ ದೇವಾಲಯಗಳು ಭೂಭಾಗ ಸಮಾನ ರೇಖೆಯಲ್ಲಿರುವುದು ಮತ್ತೊಂದು ವಿಶೇಷ.
Kshetra Samachara
14/12/2020 08:31 am