ಕುಂದಗೋಳ : ಹಬ್ಬಗಳೇಂದರೇ ಎಲ್ಲರಿಗೂ ಸಂತೋಷ ಖುಷಿ ಸಹಜ. ಆದ್ರೇ ಜಗತ್ತಿಗೆ ಅನ್ನ ನೀಡುವ ರೈತಾಪಿ ವರ್ಗದ ಹಬ್ಬ ಭೂತಾಯಿಗೆ ಸೀಮಂತ ಮಾಡುವ ಹಬ್ಬ ಎಂದ್ರೇ ಅದುವೇ ಸೀಗೆ ಹುಣ್ಣಿಮೆ. ಈ ಹಬ್ಬದ ಸಡಗರ ಸಂಭ್ರಮ ಕುಂದಗೋಳ ತಾಲೂಕಿನ ಎಲ್ಲೇಡೆ ಇಂದು ಅತಿ ವಿಜೃಂಭಣೆಯಿಂದ ಜರುಗಿತು.
ಹೌದು ! ಈಗಾಗಲೇ ಶೇಂಗಾ, ಹೆಸರು, ಉದ್ದಿನ ಬೆಳೆಗಳನ್ನು ರೈತರ ಮಡಿಲಿಗೆ ಹಾಕಿದ ಭೂತಾಯಿ. ತನ್ನ ಒಡಲಲ್ಲಿ ಮೆಣಸಿನಕಾಯಿ, ಹತ್ತಿ ಸೇರಿದಂತೆ ವಿವಿಧ ಬೆಳೆ ಹೊತ್ತು ಅನ್ನದಾತನಿಗೆ ನೀಡಲು ತುಂಬು ಗರ್ಭಿಣಿಯಂತೆ ಹಸಿರು ಹೊದಿಕೆ ಹೊತ್ತು ಕಂಗೋಳಿಸುತ್ತಿದ್ದಾಳೆ.
ಅದರ ವಿಶೇಷತೆ ಅಂಗವಾಗಿ ಇಂದು ಭೂತಾಯಿಯ ಹೆಸರಲ್ಲಿ ವಿಧ ವಿಧದ ಖಾಧ್ಯ ಅಡುಗೆ ಜೊತೆಗೆ ವಿಶೇಷವಾಗಿ ರೊಟ್ಟಿ ಖಾರಾ ಚಟ್ನಿ ಸೇರಿಸಿ "ಹುಲ್ಲು ಹುಲ್ಲ ಗೋ ಸರಬ್ರಳಿಗೋ" ಎಂದು ಭೂತಾಯಿಗೆ ಚರಗ ಚೆಲ್ಲಿ "ಬಣ್ಣಿ ಮರಕ್ಕೆ" ಪೂಜೆ ಸಲ್ಲಿಸಿ ನೂಲನ್ನು ಸಮರ್ಪಿಸಿ, ಪಾಂಡವರು ಕಳ್ಳರ ಪೂಜೆ ಮಾಡಿ, ಈ ಹಳ್ಳಿ ರೈತರು ತಾವೆಷ್ಟೇ ಅಲ್ಲದೇ "ಸಂಬಂಧಿಕರು, ಗೆಳೆಯರು, ಮಂದಿ, ಮಕ್ಕಳು ಜೊತೆ ಕೂಡಿ ಉಣ್ಣುವ ವೈಶಿಷ್ಟ್ಯಕ್ಕೆ "ಸೀಗೆ ಹುಣ್ಣಿಮೆ ಸಂಭ್ರಮ" ಕಾರಣವಾಗಿತ್ತು. ಜೊತೆಗೆ ಯುವಕರ ಕೈ ದಾರದಲ್ಲಿ ಸಿಲುಕಿದ ಗಾಳಿ ಪಟಗಳ ಹಾರಾಟ, ಎತ್ತು ಚಕ್ಕಡಿ ಮೇಳ ಮಾಡಿ ಕೇಹೊ ಕೇಹೊ ಎಂದು ಕೂಗು ಹಾಕುತ್ತಾ ಹೊಲದ ಕಡೆ ಹೆಜ್ಜೆ ಹಾಕುವ ಯುವಕರಿಗೆ ಕ್ರೇಜ್ ತಂದುಕೊಟ್ಟಿತು.
Kshetra Samachara
20/10/2021 09:54 pm