ನವಲಗುಂದ : ಪಟ್ಟಣದ ಪುರಸಭೆ ಸಭಾಭವನದಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ಹಾಗೂ ಪಟ್ಟಣದ ಮಾರಾಟ ಸಮಿತಿ ಸದಸ್ಯರುಗಳಿಗೆ ಒಂದು ದಿನದ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಹೌದು ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ಮತ್ತು ಪುರಸಭೆ ನವಲಗುಂದ ಹಾಗೂ ಧಾರವಾಡದ ಪ್ರೇರಣ ರೂರಲ್ ಡೆವಲಪ್ಮೆಂಟ್ ಸೊಸೈಟಿ ಇವರ ಸಂಯುಕ್ತ ಆಶ್ರಯದಲ್ಲಿ ದೀನದಯಾಳ ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ವೇಳೆ ಪುರಸಭೆ ಮುಖ್ಯಾಧಿಕಾರಿಗಳಾದ ಬೀರಪ್ಪ ಹಸಬಿ, ಅಧ್ಯಕ್ಷರಾದ ಮಂಜುನಾಥ ಜಾದವ, ನಾಗರಾಜ ಗೂರ್ಲ ಹೊಸೂರು, ಶರಣಪ್ಪ ಉಣಕಲ್, ವಕೀಲರಾದ ಶಾಮ್ ಶುಂದರ್ ದಂಬಳ, ಆರೋಗ್ಯ ಇಲಾಖೆ ಅಧಿಕಾರಿಗಳಾದ ರೂಪಾ ಕಣಗಿ, ಎಎಸ್ಐ ಮೇಟಿ ಹಾಗೂ ಪಾಟೀಲ್ ಇದ್ದರು.
Kshetra Samachara
26/02/2022 01:01 pm