ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ದೀಪಾವಳಿ ಆಚರಣೆ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದ ಪುರಸಭೆ

ನವಲಗುಂದ : ದೀಪಾವಳಿ ಪ್ರಯುಕ್ತ ನವಲಗುಂದ ಪುರಸಭೆಯೂ ದೀಪಾವಳಿ ಆಚರಣೆಗೆ ಸಂಬಂದಿಸಿದಂತೆ ಪರಿಷ್ಕೃತ ಮಾರ್ಗಸೂಚಿಗಳನ್ನು ಶನಿವಾರ ಕಸ ವಿಲೇವಾರಿ ವಾಹನದಲ್ಲಿ ಪ್ರಕಟಣೆಯನ್ನು ಹೊರಡಿಸಲಾಯಿತು...

ಇನ್ನೂ ಈ ಪ್ರಕರಣೆಯಲ್ಲಿ ಹಸಿರು ಪಟಾಕಿಯನ್ನು ಮಾತ್ರ ಮಾರಾಟ ಮಾಡಬೇಕು ಮತ್ತು ಹಾರಿಸಬೇಕು, ನಿಗದಿ ಪಡಿಸಿದ ಸಮಯ ಮತ್ತು ಸ್ಥಳದಲ್ಲಿ ಮಾತ್ರ ಮಾರಾಟ ಮಾಡಬೇಕು, ಎರಡು ಮಾರಾಟ ಮಳಿಗೆ ನಡುವೆ ಆರು ಮೀಟರ್ ಅಂತರ ಇರಬೇಕು, ಮತ್ತು ಮಳಿಗೆಯ ಸುತ್ತಲೂ ಸ್ಯಾನಿಟೈಸಿಂಗ್ ಮಾಡಬೇಕು, ಬರುವ ಗ್ರಾಹಕರಿಗೂ ಸ್ಯಾನಿಟೈಸ್ ಮತ್ತು ತರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆ ಮಾಡಬೇಕು ಎಂಬ ಹಲವಾರು ಮಾರ್ಗ ಸೂಚಿಗಳನ್ನು ಪಟ್ಟಣದ ಪ್ರತಿ ಬೀದಿಗಳಲ್ಲಿಯೂ ಹೊರಡಿಸಿತು. ಇನ್ನೂ ಈ ಕ್ರಮಗಳನ್ನು ಅನುಸರಿಸದೇ ಹೋದಲ್ಲಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಇದೆ ವೇಳೆ ಪ್ರಕಟಿಸಲಾಯಿತು...

Edited By : Manjunath H D
Kshetra Samachara

Kshetra Samachara

15/11/2020 10:57 am

Cinque Terre

39.19 K

Cinque Terre

1

ಸಂಬಂಧಿತ ಸುದ್ದಿ