ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ ಇಸ್ಕಾನ್ ನಲ್ಲಿ ಕಳೆಕಟ್ಟಿದ ವೈಕುಂಠ ಏಕಾದಶಿ ವೈಭವ..

ಹುಬ್ಬಳ್ಳಿ: ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಇಸ್ಕಾನ್ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ. ವೈಕುಂಠ ದ್ವಾರ ಪೂಜೆ, ಲಕ್ಷಾರ್ಚನ ಸೇವಾ, ವೆಂಕಟೇಶ್ವರ ಹೋಮ ಸೇರಿದಂತೆ ಹಲವು ಪೂಜಾ ಕಾರ್ಯಕ್ರಮಗಳು ನಡೆಯುತ್ತಿವೆ.

ಕೋವಿಡ್ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಭಾರಿ ಇಳಿಮುಖವಾಗಿದೆ. ಆದ್ರೂ ಕೆಲ ಭಕ್ತರು ವಿಶಿಷ್ಟ ರೀತಿಯಲ್ಲಿ ನೃತ್ಯದ ಮೂಲಕ ದೇವರಿಗೆ ಪೂಜೆ ಪುನಸ್ಕಾರ ಸಲ್ಲಿಸುತ್ತಿದ್ದಾರೆ. ಇಸ್ಕಾನ್ ವಿಶಿಷ್ಠ ರೀತಿಯಲ್ಲಿ ಅಲಂಕಾರಗೊಂಡಿದೆ‌. ಪ್ರತಿ ವರ್ಷ ಭಕ್ತಾದಿಗಳಿಂದ ತುಂಬಿ ತುಳುಕುತ್ತಿದ್ದ ಇಸ್ಕಾನ್ ದೇವಸ್ಥಾನ ಈ ಬಾರಿ ವಿಶೇಷ ಪೂಜಾ ಕಾರ್ಯಕ್ರಮಗಳಿಗೆ ಮಾತ್ರ ಸಾಕ್ಷಿಯಾಗಿದೆ.

Edited By : Manjunath H D
Kshetra Samachara

Kshetra Samachara

25/12/2020 10:29 am

Cinque Terre

33.42 K

Cinque Terre

0

ಸಂಬಂಧಿತ ಸುದ್ದಿ