ಕಲಘಟಗಿ:ಪಟ್ಟಣ ಸೇರಿದಂತೆ,ತಾಲೂಕಿನಾದ್ಯಂತ ಕೊರೋನಾ ನಡುವೆಯೂ ಗೌರಿ ಹುಣ್ಣಿಮೆ ಹಬ್ಬವನ್ನು ಸಂಭ್ರಮ ಸಡಗರದಿಂದ ಸೋಮವಾರ ರಾತ್ರಿ ಆಚರಿಸಲಾಯಿತು.ಸೀರೆ,ಹೊಸ ಬಟ್ಟೆ ತೊಟ್ಟು,ಹೂವಿನ ದಂಡೆ ಹಾಕಿಕೊಂಡು,ಸಕ್ಕರೆ ಗೊಂಬೆಗಳ ಆರತಿ ಹಿಡಿದ ಹೆಣ್ಣು ಮಕ್ಕಳು ದೇವಸ್ಥಾನಗಳಿಗೆ ತೆರಳಿ ಸಂಭ್ರಮಿಸಿದರು.ಗ್ರಾಮೀಣ ಭಾಗದ ಮನೆಮನೆಯಲ್ಲೂ ಹೆಣ್ಣು ಮಕ್ಕಳ ಹಬ್ಬ ಗೌರಿ ಹುಣ್ಣಿಮೆಯನ್ನು ಅತ್ಯಂತ ಸಡಗರದಿಂದ ಆಚರಿಸಲಾಯಿತು.
Kshetra Samachara
30/11/2020 10:23 pm