ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಕೊರೊನಾ ಸಂದಿಗ್ಧ ಸಮಯದಲ್ಲಿ ಸೇವೆ ಸಲ್ಲಿಸಿದವರಿಗೆ ಸನ್ಮಾನ

ಕಲಘಟಗಿ: ತಾಲೂಕಿನ ದ್ಯಾವನಕೊಂಡ ಗ್ರಾಮದಲ್ಲಿ ಕೊರೊನಾ ಸೇವೆ ಸಲ್ಲಿಸಿದ ಅಂಗನವಾಡಿ,ಆಶಾ ಕಾರ್ಯಕರ್ತೆಯರು,ಆರೋಗ್ಯ ಇಲಾಖೆ ಹಾಗೂ ಗ್ರಾ ಪಂ ಸಿಬ್ಬಂದಿಯನ್ನು ಕರ್ನಾಟಕ ಸಂಗ್ರಾಮ ಸೇನೆಯಿಂದ ಸನ್ಮಾನಿಸಲಾಯಿತು.

ಕರ್ನಾಟಕ ಸಂಗ್ರಾಮ ಸೇನೆ ತಾಲೂಕಾ ಅಧ್ಯಕ್ಷ ಸಾತಪ್ಪ ಕುಂಕೂರ ಮಾತನಾಡಿ,ಪ್ರತಿ ಗ್ರಾಮದಲ್ಲಿರುವ ಆಶಾ,ಅಂಗನವಾಡಿ ಹಾಗೂ ಕೊರೊನಾ ಸಂದಿಗ್ಧ ಸಮಯದಲ್ಲಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಸಂಘಟನೆಯಿಂದ ಸನ್ಮಾನಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಶಂಕರಗೌಡ ಬಾವಿಕಟ್ಟಿ,ಫಕ್ಕಿರಯ್ಯ ಸಂಶಿಮಠ,ತಿಪ್ಪನಗೌಡ ಮರದನಗೌಡರ,ಬಸಪ್ಪ ಹರ್ತಿ ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

23/11/2020 02:36 pm

Cinque Terre

9.26 K

Cinque Terre

0

ಸಂಬಂಧಿತ ಸುದ್ದಿ