ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ನದಿ ಉಕ್ಕಿ ನಾಡು ನಡುಗಿ ಸೃಷ್ಟಿ ಸಮೃದ್ಧಿ ಆಯಿತಲೇ ಪರಾಕ್

ಕುಂದಗೋಳ : ತಾಲೂಕಿನಲ್ಲೇ ಇತಿಹಾಸ ಪ್ರಸಿದ್ಧ ಪುರಾತನ ಬೆನಕನಹಳ್ಳಿ ಗ್ರಾಮದ ಮೈಲಾರಲಿಂಗೇಶ್ವರ ಜಾತ್ರೆ ಶಾಸ್ತ್ರೋಕ್ತ ಸರಳವಾಗಿ ಇಂದು ನೆರವೇರಿತು. ಬೆಳಂ ಬೆಳಿಗ್ಗೆಯೆ ಮೈಲಾರಲಿಂಗೇಶ್ವರನಿಗೆ ಗ್ರಾಮಸ್ಥರು ಅಭಿಷೇಕ ಮಹಾಪೂಜೆ ನೆರವೇರಿಸಿದರು.

ಬಳಿಕ ಗ್ರಾಮದಲ್ಲೇಲ್ಲಾ ದೀಪ ಬೆಳಗಿಸುವ ಕಾರ್ಯಕ್ರಮ ನಡೆಯಿತು, ಗೊರವಯ್ಯನವರು ಬೆಳಕು ಹೊಂಡಿಸುವ ಕಾರ್ಯಕ್ರಮ ನಡೆಸಿಕೊಟ್ಟ ನಂತರದಲ್ಲಿ ಎರೆಡು ಸರಪಳಿ ಹರಿಯುವ ವಿಶಿಷ್ಟ ಪವಾಡ ಕಾರ್ಯಕ್ರಮ ನಡೆದವು. ಪ್ರತಿವರ್ಷವು ಇಡೀ ರಾಜ್ಯ ದೇಶ ಆಗು ಹೋಗುಗಳಲ್ಲಿ ಇಲ್ಲಿನ ಮೈಲಾರಲಿಂಗೇಶ್ವರ ದೇವರ ಕಾರ್ಣೀಕ ಪ್ರಸಿದ್ಧಿ ಪಡೆದಿದ್ದು ಈ ವರ್ಷ "ನದಿ ಉಕ್ಕಿತು ನಾಡು ನಡುಗಿತು ಸೃಷ್ಟಿ ಸಮೃದ್ಧಿ ಆಯಿತಲೇ ಪರಾಕ್" ಎಂದು ಬಿಲ್ಲನ್ನೇರಿದ ಗೋರವಯ್ಯ ಮುಂದಿನ ಆಗು ಹೋಗುಗಳ ಭವಿಷ್ಯದ ನುಡಿ ನುಡಿದರು.

ಈಗಾಗಲೇ ಜಾತ್ರೆಗೆ ಸೇರಿದ ಜನರು ಈ ವರ್ಷಯೂ ಸಹ ಮಳೆ ಬೆಳೆ ಸಂಪನ್ನವಾಗುವ ನಿರೀಕ್ಷೆಗಳಿದ್ದು, ಜಲ ಪ್ರವಾಹ ಕಾಡಲಿದೆಯಾ ? ಎಂಬ ಎಚ್ಚರಿಕೆಯನ್ನ ಹಿರಿಯರು ವಿಮರ್ಶಿಸಿದರು. ಜಾತ್ರೆಗೆ ಆಗಮಿಸಿದ ಸಕಲ ಭಕ್ತಾಧಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

Edited By :
Kshetra Samachara

Kshetra Samachara

17/11/2020 05:52 pm

Cinque Terre

26.24 K

Cinque Terre

1

ಸಂಬಂಧಿತ ಸುದ್ದಿ