ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಶೃಂಗಾರಗೊಂಡ ಎತ್ತುಗಳೊಂದಿಗೆ ಸಂಭ್ರಮದ ಕಾರ ಹುಣ್ಣಿಮೆ

ನವಲಗುಂದ : ಎತ್ತುಗಳ ಮೈತೊಳೆದು ಶೃಂಗರಿಸಿ, ಮನೆಯ ಹೆಣ್ಣು ಮಗಳು ಆರತಿ ಎತ್ತಿ ನೈವೇದ್ಯ ಸಮರ್ಪಿಸಿದ ಬಳಿಕ ಕರಿ ಹರೆಯುವ ವೇಳೆ ನಮ್ಮ ಎತ್ತುಗಳೇ ಸ್ಪರ್ಧೆಯಲ್ಲಿ ಜಯಗಳಿಸಲಿ ಎಂದು ಮನೆಯವರು ಪ್ರಾರ್ಥಿಸುವಂತದ್ದು, ಇಂತಹ ಎಲ್ಲಾ ದೃಶ್ಯಗಳು ಕಂಡು ಬಂದದ್ದು ನವಲಗುಂದ ತಾಲ್ಲೂಕಿನ ಹೆಬ್ಬಾಳ ಗ್ರಾಮದಲ್ಲಿ...

ಬೇಸಿಗೆ ಮುಗಿದು ಮುಂಗಾರು ಆರಂಭವಾಗುತ್ತಿದ್ದಂತೆ ಬರುವ ಪ್ರಥಮ ಹಬ್ಬವೇ ಈ ಕಾರ ಹುಣ್ಣಿಮೆ. ಕಾರ ಹಬ್ಬ ಆಚರಿಸಿ, ರೈತರು ಉಳುಮೆಗಾಗಿ ಎತ್ತುಗಳನ್ನು ಗಳೆ ಕಟ್ಟುತ್ತಾರೆ. ದೇಶಕ್ಕೆ ರೈತ ಬೆನ್ನೆಲುಬಾದರೆ ರೈತನಿಗೆ ಎತ್ತುಗಳೇ ಬೆನ್ನೆಲುಬಾಗಿದ್ದು, ಅವುಗಳನ್ನು ಸಿಂಗರಿಸಿ ಊರೆಲ್ಲಾ ಪ್ರದರ್ಶಿಸುವುದು ರೈತನಿಗೆ ಹೆಮ್ಮೆಯ ಸಂಗತಿ.

ಹೆಬ್ಬಾಳ ಗ್ರಾಮದಲ್ಲಿನ ಮಕ್ಕಳು ಸೇರಿ ಯುವಕರು ಸ್ಪರ್ಧೆಯಲ್ಲಿ ಭಾಗವಹಿಸಿ, ತಮ್ಮ ಶಕ್ತಿ ಪ್ರದರ್ಶಿಸಿದರು. ಪ್ರತಿ ಬೀದಿ ಬೀದಿಗಳಲ್ಲಿ ಎತ್ತುಗಳೊಂದಿಗೆ ಓಡೋಡಿ ಸಂಭ್ರಮದಿಂದ ಕಾರ ಹುಣ್ಣಿಮೆ ಆಚರಿಸಿದರು.

Edited By : PublicNext Desk
Kshetra Samachara

Kshetra Samachara

14/06/2022 07:54 pm

Cinque Terre

13.39 K

Cinque Terre

0

ಸಂಬಂಧಿತ ಸುದ್ದಿ