ಹುಬ್ಬಳ್ಳಿ: ಒಂದು ಕಡೆ ಮಳೆ ಸೃಷ್ಟಿಸಿದ ಅವಾಂತರ. ಮತ್ತೊಂದೆಡೆ ಕೊರೊನಾ ಎಂಬ ಮಹಾಮರಿ ಭೀತಿ. ಇದರ ನಡುವೆಯೂ ರೈತ ಖುಷಿಯಿಂದ ಹಬ್ಬವನ್ನು ಆಚರಿಸುತ್ತಿದ್ದಾರೆ. ಮಳೆಯಿಂದ ಬೆಳೆ ಕಳೆದುಕೊಂಡಿರುವ ಅನ್ನದಾತ ಇಂದು ಭೂಮಿತಾಯಿಗೆ ಪೂಜೆ ಸಲ್ಲಿಸುವ ದೃಶ್ಯಗಳು ಜಿಲ್ಲೆಯಲ್ಲಿ ಎಲ್ಲೆಡೆ ಕಂಡು ಬಂತು....
ದಸರಾ ಮತ್ತು ದೀಪಾವಳಿ ನಮ್ಮ ಹಿಂದೂ ಧರ್ಮದಲ್ಲಿ ಆಚರಿಸುವ ಅತಿ ದೊಡ್ಡ ಹಬ್ಬಗಳು. ಈ ಹಬ್ಬಗಳ ನಡುವೆ ಬಂದು ಹೊಗುವ ದೊಡ್ಡ ಹಬ್ಬವೇ ಭೂಮಿ ಹುಣ್ಣಿಮೆ, ನಮ್ಮ ಸಂಸ್ಕೃತಿಯಲ್ಲಿ ತುಂಬು ಗರ್ಭಿಣಿಗೆ ಸೀಮಂತ ಮಾಡುವುದು ಒಂದು ಸಂಪ್ರದಾಯ.
ಶ್ರಾವಣ ಮಾಸದ ಪೂರ್ವದಲ್ಲಿ ಸುರಿಯುವ ಮುಂಗಾರು ಮಳೆಯ ಸಂದರ್ಭದಲ್ಲಿ, ಬಿತ್ತಿದ ಬೀಜ ಮೊಳಕೆ ಒಡೆದು ಆಶ್ವೀಜ ಕೊನೆಯಾರ್ದದಲ್ಲಿ, ಬೆಳೆದ ಪೈರು ರೈತನ ಮೊಗದಲ್ಲಿ ಮಂದಹಾಸ ಬೀರಿಸುತ್ತದೆ.
ಆಗ ಭೂಮಿತಾಯಿ ತುಂಬು ಗರ್ಭಿಣಿಯಂತೆ ಕಂಗೊಳಿಸುತ್ತಾಳೆ. ಆಶ್ವೀಜ ಮಾಸದಲ್ಲಿ ಬರುವ ಸೀಗೆ ಹುಣ್ಣಿಮೆಯಲ್ಲಿ, ಭೂಮಿತಾಯಿಗೆ ಸೀಮಂತ ಮಾಡುವ ವಿಶಿಷ್ಟ ಸಂಪ್ರದಾಯವೇ ಸೀಗೆ ಹುಣ್ಣಿಮೆ. ಅತಿವೃಷ್ಟಿ ಹಾಗೂ ಕೊರನಾ ನಡುವೆಯೂ ರೈತರ ಸಂಭ್ರಮ ನೋಡುವುದೇ ಒಂದು ತರಹ ಖುಷಿ...
ಈ ಹಬ್ಬಕ್ಕೆ ಇಡೀ ಕುಟುಂಬದವರು ಸೇರಿಕೊಂಡು, ಹೀಗೆ ಹಲವಾರು ರೀತಿಯ ತಿನಿಸಿಮಾಡಿಕೊಂಡು, ಎತ್ತಿನ ಗಾಡಿ ಅಥವಾ ಟ್ಯಾಕ್ಟರ್ ಮೇಲೆ ತಮ್ಮ ಹೊಲಕ್ಕೆ ಬಂದು ಭೂಮಿತಾಯಿಯ ಪೂಜೆ ಮಾಡುತ್ತಾರೆ.
ಒಟ್ಟಿನಲ್ಲಿ ರೈತನಿಗೆ ಎಷ್ಟೇ ಕಷ್ಟ ಬಂದರೂ ಕೂಡ, ಸಂಪ್ರದಾಯ ಬಿಟ್ಟು ಕೊಡವುದಿಲ್ಲ ಎನ್ನೊದಕ್ಕೆ ಈ ಸೀಗೆ ಹುಣ್ಣುಮೆ ಉದಾಹರಣೆ.....!
Kshetra Samachara
30/10/2020 04:37 pm