ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡದಲ್ಲಿ ಮತ್ತೊಂದು ಅಂಬಾರಿ ಹೊತ್ತು ಸಾಗಿದ ಕೃತಕ ಆನೆ

ಧಾರವಾಡ: ಧಾರವಾಡ ಜಂಬೂ ಸವಾರಿ ಉತ್ಸವ ಸಮಿತಿ ವತಿಯಿಂದ ನಿನ್ನೆಯಷ್ಟೆ ಜಂಬೂ ಸವಾರಿ ನಡೆದಿತ್ತು. ಈ ಸವಾರಿಯಲ್ಲಿ ಕೃತಕ ಆನೆ ಬಂಡೆಮ್ಮನ ಮೂರ್ತಿ ಹೊತ್ತು ಸಾಗಿತ್ತು.

ಸೋಮವಾರ ಧಾರವಾಡದಲ್ಲಿ ಮೂಲ ಜಂಬೂ ಸವಾರಿ ಉತ್ಸವ ಸಮಿತಿಯು ಮತ್ತೊಂದು ರೀತಿಯಲ್ಲಿ ಜಂಬೂ ಸವಾರಿ ನಡೆಸುವ ಮೂಲಕ ದಸರಾ ಹಬ್ಬವನ್ನು ಸರಳವಾಗಿ ಆಚರಣೆ ಮಾಡಿದೆ.

ಪ್ರತಿವರ್ಷ ಈ ಎರಡೂ ಜಂಬೂ ಸವಾರಿ ಉತ್ಸವ ಸಮಿತಿಗಳು ಅದ್ಧೂರಿಯಿಂದ ಜಂಬೂ ಸವಾರಿ ನಡೆಸುತ್ತಿದ್ದವು. ಈ ವರ್ಷ ಕೊರೊನಾದಿಂದಾಗಿ ಎರಡೂ ಜಂಬೂ ಸವಾರಿಗಳು ಕಳೆ ಕಳೆದುಕೊಂಡಿವೆ.

ಧಾರವಾಡದ ಗೌಳಿ ಗಲ್ಲಿಯ ಸರಸ್ವತಿಪುರದಲ್ಲಿರುವ ಮಾರುತಿ ದೇವಸ್ಥಾನದಲ್ಲಿ ಸೋಮವಾರ ಧಾರವಾಡ ಮೂಲ ದಸರಾ ಜಂಬೂ ಸವಾರಿ ಉತ್ಸವ ಸಮಿತಿ ವತಿಯಿಂದ ಜಂಬೂ ಸವಾರಿ ನಡೆಸಲಾಯಿತು. ಕೆಲಗೇರಿಯ ಪರಿಸರ ಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಅವರು ನಿರ್ಮಿಸಿದ ಕೃತಕ ಆನೆ ಆಂಜನೇಯನ ಮೂರ್ತಿಯ ಅಂಬಾರಿ ಹೊತ್ತು ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಿತು.

ಮೆರವಣಿಗೆಯಲ್ಲಿ ಸುಮಂಗಲೆಯರು ಹಾಗೂ ಜಾನಪದ ಕಲಾ ತಂಡಗಳು ಪಾಲ್ಗೊಂಡಿದ್ದವು.

Edited By : Manjunath H D
Kshetra Samachara

Kshetra Samachara

26/10/2020 06:37 pm

Cinque Terre

30.9 K

Cinque Terre

0

ಸಂಬಂಧಿತ ಸುದ್ದಿ