ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಇಷ್ಟು ದಿನ ಬಂದ್ ಆಗಿದ್ದ ಖೋಟಾ ನೋಟ್ ಚಲಾವಣೆ ಮತ್ತೇ ಮುನ್ನೆಲೆಗೆ ಬಂದಿದೆ. ಪ್ರಖ್ಯಾತಿ ಮತ್ತು ಕುಖ್ಯಾತಿಗಳನ್ನು ಶ್ರೇಣೀಕೃತ ಹಂತದಲ್ಲಿ ಸರಿದೂಗಿಸಿಕೊಂಡು ಹೋಗುತ್ತಿರುವ ಹುಬ್ಬಳ್ಳಿಯಲ್ಲಿ ಖೋಟಾ ನೋಟಿನ ಹಾವಳಿ ಮತ್ತೇ ಸದ್ದು ಮಾಡುತ್ತಿದೆ.
ಹೌದು...ಹುಬ್ಬಳ್ಳಿಯ ಚನ್ನಮ್ಮ ಬಸ್ ನಿಲ್ದಾಣದ ಬಳಿ ಖೋಟಾ ನೋಟುಗಳನ್ನು ಚಲಾವಣೆ ಮಾಡುತ್ತಿದ್ದ ಮೂವರನ್ನು ಉಪನಗರ ಠಾಣೆ ಪೊಲೀಸರು ಸೋಮವಾರ ರಾತ್ರಿ ಬಂಧಿಸಿದ್ದಾರೆ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಶಿವಾನಂದ ಕಾರಜೋಳ, ವಿಜಯಪುರದ ಅಡವಿ ಶಂಕರಲಿಂಗನ ಗುಡಿ ನಿವಾಸಿ ಕಲ್ಲಯ್ಯ ಪಟ್ಟದಮಠ ಹಾಗೂ ಉತ್ತರ ಕನ್ನಡ ಜಿಲ್ಲೆಯ ಹೆಗ್ಗರಣಿಯ ಗುರುರಾಜ ಜಾಧವ ಬಂಧಿತರು ಎಂದು ತಿಳಿದುಬಂದಿದೆ.
ಆರೋಪಿಗಳು ಸನ್ಮಾನ್ ಲಾಡ್ಜ್‌ನಲ್ಲಿ 200 ಮತ್ತು 100 ಮುಖಬೆಲೆಯ ಖೋಟಾ ನೋಟುಗಳನ್ನು ಮಾರಾಟ ಮಾಡುತ್ತಿರುವ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಲಾಯಿತು. ಬಂಧಿತ ಆರೋಪಿಗಳಿಂದ 73 ಖೋಟಾ ನೋಟುಗಳು, ಒಂದು ವಾಹನ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Kshetra Samachara
12/10/2022 01:36 pm