ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕ್ಷುಲ್ಲಕ ವಿಚಾರಕ್ಕೆ ಹೆಂಡತಿ ಜೊತೆ ಜಗಳ; ಚಾಕು ಇರಿದ ಪಾಪಿ ಪತಿ

ಹುಬ್ಬಳ್ಳಿ: ಗಂಡ ಹೆಂಡತಿ ನಡುವೆ ಜಗಳ ಉಂಡು ಮಲಗುವ ತನಕ ಅಂತಾರೆ. ಆದ್ರೆ ಇಲ್ಲೊಬ್ಬ ಹೆಂಡತಿಯ ಜೊತೆ ಕ್ಷುಲ್ಲಕ ವಿಚಾರಕ್ಕೇ ಜಗಳ ತಗೆದು ಹೆಂಡತಿಗೆ ಚಾಕು ಇರಿದು ಕೊಲೆಗೆ ಯತ್ನಿಸಿ ಪೊಲೀಸ್ ಅತಿಥಿಯಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹೌದು ಹೀಗೆ ಬಟ್ಟೆಯ ಮೇಲೆ ರಕ್ತದ ಕಲೆಯನ್ನು ಮಾಡಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋ ಈ ಮಹಿಳೆಯ ಹೆಸರು ಮೇಘನಾ, ಹುಬ್ಬಳ್ಳಿಯ ಗಂಗಾಧರ ನಗರದ ನಿವಾಸಿ,ಇಂದು ತನ್ನ ಮನೆಯಲ್ಲಿ ಕ್ಷುಲ್ಲಕ ವಿಚಾರಕ್ಕೇ ಗಂಡ ರೋಹಿತ ಜೊತೆ ಜಗಳ ಅತಿರೇಕಕ್ಕೆ ಹೋಗುತ್ತಿದ್ದ ಹಾಗೆ ಮನೆಯ ಅಡುಗೆ ಕೋಣೆಯಲ್ಲಿದ್ದ ಚಾಕುವಿನಿಂದ ಮೇಘನಾಳ ಕುತ್ತಿಗೆಗೆ ರೋಹಿತ ಇರಿದಿದ್ದಾನೆ.

ಚಾಕು ಇರಿದ ಪರಿಣಾಮ ಗಾಯಗೊಂಡ ಮೇಘನಾಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗಿದ್ದು, ಸದ್ಯ ಮೇಘನಾ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಇತ್ತ ಹೆಂಡತಿಗೆ ಚಾಕು ಇರಿದಿದ್ದ ಗಂಡ ರೋಹಿತನನ್ನು ಬೆಂಡಿಗೇರಿ ಠಾಣೆಯ ಪೊಲೀಸರು ಬಂಧನ ಮಾಡಿ ಪ್ರಕರಣ ದಾಖಲು ಮಾಡಿದ್ದಾರೆ.

ಗಂಡ-ಹೆಂಡತಿಯ ನಡುವಿನ ಸಣ್ಣ ಸಣ್ಣ ವಿಚಾರಗಳನ್ನು ಶಾಂತವಾಗಿ ಕುಳಿತು ಬಗೆಹರಿಸಿಕೊಳ್ಳುದು ಬಿಟ್ಟು ಪ್ರಾಣ ತೆಗೆಯುವ ಮಟ್ಟಕ್ಕೆ ಹೋಗುತ್ತಿರೋದು ಮಾತ್ರ ದುರಂತವೇ ಸರಿ.

-ವಿನಯ ರೆಡ್ಡಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

11/10/2022 08:02 am

Cinque Terre

101.28 K

Cinque Terre

2

ಸಂಬಂಧಿತ ಸುದ್ದಿ