ರಾತ್ರಿ ಸಮಯದಲ್ಲಿ ಬಾಡಿಗೆ ಆಟೋದಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರನ್ನು ಟಾರ್ಗೆಟ್ ಮಾಡಿ ಅವರನ್ನು ಆಟೋದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಚಾಕು ತೋರಿಸಿ ಅವರ ಬಳಿ ಇದ್ದ ಹಣ, ಮೊಬೈಲ್‌ಗಳನ್ನು ದೋಚುತ್ತಿದ್ದ ಆಟೋ ಚಾಲಕನನ್ನು ಹುಬ್ಬಳ್ಳಿಯ ಉಪನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಹೀಗೆ ಫೋಟೋದಲ್ಲಿ ಕಾಣುತ್ತಿರೋ ಈ ವ್ಯಕ್ತಿಯ ಹೆಸರು ಅಬ್ದುಲ್ ಪಸ್ಕಿ. ಈತ ಹಳೇ ಹುಬ್ಬಳ್ಳಿಯ ಬೇಪಾರಿ ಪ್ಲಾಟ್ ನಿವಾಸಿ. ವೃತ್ತಿಯಲ್ಲಿ ಆಟೋ ಚಾಲಕ ಆದ್ರೆ ಈತ ತನ್ನ ಆಟೋದಲ್ಲಿ ಪ್ರಯಾಣಿಸುವ ಪ್ರಯಾಣಿಕನನ್ನು ದರೋಡೆ ಮಾಡಿ ಇದೀಗ ಪೊಲೀಸ್ ಅತಿಥಿಯಾಗಿದ್ದಾನೆ.
ಕಳೆದ ಮೂರು ದಿನಗಳ ಹಿಂದೆ ಚೆನ್ನಮ್ಮ ಸರ್ಕಲ್ ಬಳಿ ಫಾರ್ಚುನ್ ಹೋಟೆಲ್‌ನಲ್ಲಿ ಕೆಲಸ ಮಾಡುವ ಹರಿಮೋಹನ್ ನಡುರಾತ್ರಿ ಅಬ್ದುಲ್‌ನ ಆಟೋ ಏರಿ ಗೋಕುಲ್ ರಸ್ತೆಯಲ್ಲಿ ಬಿಡಲು ಹೇಳಿದ್ದಾರೆ. ಆದ್ರೆ ಅಬ್ದುಲ್ ಗೋಕುಲ್ ರಸ್ತೆಯತ್ತ ಹೋಗುವ ಬದಲು ಕಾರವಾರ ರಸ್ತೆಯಲ್ಲಿನ ಸಂಪಿಗೆರೆ ಹತ್ತಿರ ಕರೆದೊಯ್ದು ಚಾಕು ತೋರಿಸಿ ಹರಿಮೋಹನ್ ಬಳಿ ಇದ್ದ ದುಡ್ಡು, ಮೊಬೈಲ್‌ಗಳನ್ನು ದರೋಡೆ ಮಾಡಿ ಕಾಲ್ಕಿತ್ತಿದ್ದ.
ಇತ್ತ ಹರಿಮೋಹನ್ ಉಪನಗರ ಠಾಣೆಯ ಪೊಲೀಸ್ ಠಾಣೆಗೆ ಹೋಗಿ ಘಟನೆಯ ಮಾಹಿತಿ ತಿಳಿಸುತ್ತಿದ್ದರು. ಈ ಸಂಬಂಧ ಇನ್ಸ್‌ಪೆಕ್ಟರ್ ರವಿಚಂದ್ರ ಹಾಗೂ ಅವರ ಟೀಮ್ ಪ್ರಕರಣ ದಾಖಲಿಸಿಕೊಂಡು ಆರೋಪಿ ಅಬ್ದುಲ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ವಿನಯ ರೆಡ್ಡಿ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
01/10/2022 06:07 pm