ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಸುಗಲ್ ಗ್ರಾಮದಲ್ಲಿ ಹೆಚ್ಚಿದ ಕಳ್ಳರ ಹಾವಳಿ; ಗ್ರಾಮೀಣ ಠಾಣೆ ಪೊಲೀಸರೆ ಏನು ಮಾಡ್ತಾ ಇದೀರಾ...?

ಹುಬ್ಬಳ್ಳಿ : ಮನೆ ಬೀಗ ಮುರಿದು ಮನೆಗಳ್ಳತನ ಮಾಡಿದ ಘಟನೆ, ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದ ಮಾರುತಿ ನಗರದಲ್ಲಿ ತಡರಾತ್ರಿ ನಡೆದಿದೆ.

ಹೌದು ಪ್ರಕಾಶ ನೀರಲಗಿ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಮನೆಯಲ್ಲೇ ಯಾರು ಇಲ್ಲದನ್ನ ಗಮನಿಸಿದ ಕಳ್ಳರು ಮನೆ ಬೀಗ ಮುರಿದು ಒಳ ನುಗ್ಗಿದ್ದಾರೆ. ಮನೆಯಲ್ಲಿದ್ದ ಟ್ರೇಜರಿ ಹಾಗೂ ಸುಟಕೇಶನ ಕೀ ಮುರಿದು ಕಳ್ಳತನ ಮಾಡಿದ್ದಾರೆ. ಇನ್ನು ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕಿದೆ.

ಇತ್ತಿಚೆಗೆ ಕುಸಗಲ್ ಗ್ರಾಮದಲ್ಲಿ ಕಳ್ಳತನ ಸಾಮಾನ್ಯವಾಗಿದೆ. ಯಾಕೆಂದರೆ ಹಿಂದೆ ಕಿರಾಣಿ ಅಂಗಡಿ, ಹಾಗೂ ಮನೆಗಳ್ಳತನ ಮಾಡಿದ್ದರು. ಆದರೆ ಇನ್ನೂವರೆಗೂ ಕಳ್ಳರು ಯಾರು ಎಂಬುದು ಪತ್ತೆಯಾಗಿಲ್ಲ. ಆದ್ದರಿಂದ ಇಲ್ಲಿನ ಜನತೆ ಆತಂಕದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇನ್ನು ಮುಂದಾದ್ರೂ ಸಹ ಪೊಲೀಸರು ಕಳ್ಳರನ್ನ ಸೆರೆ ಹಿಡಿಯುವ ಕೆಲಸ ಮಾಡಲಿ ಎಂಬುದೇ ಸಾರ್ವಜನಿಕರ ಒತ್ತಾಯವಾಗಿದೆ.

Edited By : Shivu K
Kshetra Samachara

Kshetra Samachara

30/09/2022 02:39 pm

Cinque Terre

39.15 K

Cinque Terre

1

ಸಂಬಂಧಿತ ಸುದ್ದಿ