ಧಾರವಾಡ: ಧಾರವಾಡದ ಪ್ರತಿಷ್ಠಿತ ಡಿಮಾನ್ಸ್ ಆಸ್ಪತ್ರೆಯ ನಿರ್ದೇಶಕ ಡಾ.ಮಹೇಶ ದೇಸಾಯಿ ಅವರ ಮೇಲೆ ರಾಯಚೂರು ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ದೂರು ದಾಖಲಾಗಿದೆ.
ಡಿಮಾನ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಸಹ ವೈದ್ಯ ಡಾ.ರಮೇಶ ಬಾಬು ಎಂಬುವವರು ದೂರು ದಾಖಲಿಸಿದ್ದಾರೆ. ಡಾ.ಮಹೇಶ ದೇಸಾಯಿ ಅವರು, ತಮಗೆ ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ. ತಮ್ಮ ವೇತನವನ್ನೂ ಉದ್ದೇಶಪೂರ್ವಕವಾಗಿ ತಡೆಹಿಡಿದಿದ್ದಾರೆ. ನಾನು ಪರಿಶಿಷ್ಟ ಜಾತಿಯವನಾಗಿದ್ದರಿಂದ ನನಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೇ ಹಾಜರಾತಿ ಇದ್ದರೂ ಗೈರು ಹಾಜರಿ ಎಂದು ತೋರಿಸಿ ನನ್ನ ವೇತನವನ್ನು ತಡೆಹಿಡಿದಿದ್ದಾರೆ ಎಂದು ಡಾ.ರಮೇಶ ಬಾಬು ಆರೋಪಿಸಿದ್ದಾರೆ.
ಡಾ.ಮಹೇಶ ದೇಸಾಯಿ ಅವರ ಜೊತೆಗೂ ರಾಘವೇಂದ್ರ ನಾಯಕ ಎನ್ನುವವರು ತಮಗೆ ಕಿರುಕುಳ ನೀಡಿದ್ದಾರೆ ಎಂದು ರಮೇಶ ಬಾಬು ದೂರಿನಲ್ಲಿ ಆರೋಪಿಸಿದ್ದು, ಸದ್ಯ ಈ ಪ್ರಕರಣವನ್ನು ದಾಖಲಿಸಿಕೊಂಡಿರುವ ರಾಯಚೂರು ಮಾರ್ಕೆಟ್ ಯಾರ್ಡ್ ಠಾಣೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
Kshetra Samachara
23/09/2022 04:18 pm