ಹುಬ್ಬಳ್ಳಿ: ನಮ್ಮ ಸಮಾಜದಲ್ಲಿ ಅತ್ತಿಗೆ ಹಾಗೂ ಮೈದುನನ ಸಂಬಂಧಕ್ಕೆ ಮಹತ್ವದ ಸ್ಥಾನಮಾನ ಇದೆ. ಅತ್ತಿಗೆ ಅಂದ್ರೆ ಸಾಕು ತಾಯಿ ಸಮಾನ ನೋಡಲಾಗುತ್ತೆ. ಆದರೆ ಆ ಸಂಬಂಧಕ್ಕೆ ಅನೈತಿಕ ಎಂಬ ಕಪ್ಪು ಮಸಿಯನ್ನು ಬಳೆದು ಕೊನೆಗೆ ಮೈದುನನಿಂದಲೇ ಹೆಣವಾದ ಅತ್ತಿಗೆ ಕಥೆ ಇದು. ಅಷ್ಟಕ್ಕೂ ಇದೇನು ಅನೈತಿಕದ ಕಥೆ ಅಂತೀರಾ ಹಾಗಾದ್ರೆ ಈ ಸ್ಟೋರಿ ನೋಡಿ....
ಹೌದು.. ಹೀಗೆ ಫೋಟೋದಲ್ಲಿ ಕಾಣುತ್ತಿರೋ ಈ ಮಹಿಳೆಯ ಹೆಸರು ಸುನಂದಾ ವಯಸ್ಸು 38 ಈಕೆಯನ್ನು ಕಳೆದ 10 ವರ್ಷಗಳ ಹಿಂದೆ ಕುಂದಗೋಳ ತಾಲ್ಲೂಕಿನ ಯರಿನಾರಾಯನಪುರದ ಮಂಜುನಾಥ ಎಂಬವರಿಗೆ ಮದುವೆ ಮಾಡಿ ಕೊಡಲಾಗಿತ್ತು. ಆದ್ರೆ ಮದುವೆಯಾದ ಒಂದೇ ವರ್ಷದಲ್ಲಿ ತನ್ನ ಮೈದುನನಾದ ಮಹಾಂತೇಶ ಜೊತೆ ಸುನಂದಾ ಅಕ್ರಮ ಸಂಬಂಧ ಬೆಳೆಸಿದ್ದಳು. ಅಷ್ಟೇ ಅಲ್ಲದೇ ಅವನ ಜೊತೆ ಓಡಿ ಹೋಗಿ ಕಲಘಟಗಿ ತಾಲ್ಲೂಕಿನ ಹಳ್ಳಿಯೊಂದರಲ್ಲಿ ಕಳೆದ 8 ವರ್ಷಗಳಿಂದ ವಾಸವಾಗಿದ್ದಳು. ಇದರ ನಡುವೆ ಕಳೆದ ನಾಲ್ಕು ತಿಂಗಳ ಹಿಂದೆ ಸುನಂದಾ ತನ್ನ ತವರು ಮನೆಗೆ ಹೋದಾಗ, ತವರು ಮನೆಯವರು ಸುನಂದಾಳಿಗೆ ಬುದ್ಧಿ ಹೇಳಿ ಆಕೆಯ ಮನವೊಲಿಸಿ ಮತ್ತೆ ಗಂಡನ ಮನೆಗೆ ಕಳುಹಿಸಿದ್ದರು.
ಇತ್ತ ಮಹಾಂತೇಶ ಅತ್ತಿಗೆಯನ್ನು ಬಿಟ್ಟಿರಲಾರದೆ ಗುರುವಾರ ಯರಿನಾರಾಯನಪುರದ ಆಕೆಯ ಗಂಡನ ಮನೆಗೆ ಬಂದು ನೀನು ನನ್ನ ಜೊತೆ ಬಾ, ನಿನಗೋಸ್ಕರ ನಾನು ಮದುವೆಯಾಗಿಲ್ಲ. ನನ್ನ ಜೀವನ ಹೇಗೆ ಎಂದು ಜಗಳ ತೆಗೆದಿದ್ದಾನೆ. ಇದಕ್ಕೆ ಸುನಂದಾ ಒಪ್ಪದೇ ಇದ್ದಾಗ ಕೂಡುಗೋಲಿನಿಂದ ಸುನಂದಾಳ ಕುತ್ತಿಗೆ ಕಡಿದು ಕೊಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದ.
ಕೂಡಲೇ ಈ ಸುದ್ದಿ ಕುಂದಗೋಳ ಠಾಣೆಯ ಇನ್ಸ್‌ಪೆಕ್ಟರ್ ಮಾರುತಿ ಗುಳಾರಿ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಷ್ಟೇ ಅಲ್ಲದೆ ತಕ್ಷಣವೇ ಆರೋಪಿ ಮಹಾಂತೇಶನನ್ನು ತಕ್ಷಣವೇ ಬಂಧನ ಮಾಡಿದ್ದರು. ಈ ಸಂಬಂಧ ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಟ್ಟಿನಲ್ಲಿ ನೈತಿಕತೆಯಿಂದ ತನ್ನ ಗಂಡನ ಜೊತೆ ಬಾಳ್ವೆ ಮಾಡಬೇಕಾದ ಸುನಂದಾ ಮೈದುನನ ಜೊತೆ ಅನೈತಿಕ ಸಂಬಂಧ ಬೆಳೆಸಿ ದುರಂತ ಸಾವು ಕಂಡರೆ ಇತ್ತ ಮಹಾಂತೇಶ ಜೈಲು ಸೇರಿದ್ದಾನೆ.
ವಿನಯ ರೆಡ್ಡಿ ಪಬ್ಲಿಕ್ ನೆಕ್ಸ್ಟ್ ಕುಂದಗೋಳ.
Kshetra Samachara
09/09/2022 08:10 pm