ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಗಣೇಶ ವಿಸರ್ಜನೆಯಲ್ಲಿ ಪೊಲೀಸ್-ಪಾಲಿಕೆ ಸದಸ್ಯನ ನಡುವೆ ವಾಗ್ವಾದ

ಹುಬ್ಬಳ್ಳಿ: ಗಣಪತಿ ಪ್ರತಿಷ್ಠಾಪನೆಗೆ ಸಾಕಷ್ಟು ಹೋರಾಟ ನಡೆದಿದ್ದ ಹುಬ್ಬಳ್ಳಿಯಲ್ಲಿ ಗಣೇಶ ವಿಸರ್ಜನೆಗೂ ಕೂಡ ಗಲಾಟೆ ನಡೆಯುತ್ತಿವೆ. ಗಣೇಶ ವಿಸರ್ಜನೆ ವೇಳೆಯಲ್ಲಿ ಪಾಲಿಕೆ ಸದಸ್ಯ ನಿರಂಜನಯ್ಯ ಹಿರೇಮಠ ಹಾಗೂ ಪೊಲೀಸ್ ಅಧಿಕಾರಿಗಳ ನಡುವೆ ವಾಗ್ವಾದ ನಡೆದಿರುವ ಘಟನೆ ಅಂಚಟಗೇರಿ ಪ್ಲಾಟ್, ಬಸವ ನಗರ, ಬಿಡನಾಳದಲ್ಲಿ ನಡೆದಿದೆ.

ಪಾಲಿಕೆ ಸದಸ್ಯ ನಿರಂಜನಯ್ಯ ಹಿರೇಮಠ ಗಣೇಶ ವಿಸರ್ಜನೆಗೆ ಸಮಯಾವಕಾಶ ನೀಡಿ ಎಂದು ಮನವಿ ಮಾಡಿದ್ದು, ಈ ಹಿನ್ನಲೆಯಲ್ಲಿ ಬೆಂಡಿಗೇರಿ ಪೊಲೀಸ್ ಠಾಣೆಯ ಸಿಪಿಐ ಶ್ಯಾಮ್ ರಾವ್ ಸಜ್ಜನ ಅವರ ಜೊತೆ ಮಾತಿನ ಚಕಮಕಿ ನಡೆಯಿತು.

ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಿ ಎಂದು ಪಾಲಿಕೆ ಸದಸ್ಯ ಹಿರೇಮಠ ಮನವಿ ಮಾಡಿದ್ದು, ಸುಪ್ರೀಂ ಕೋರ್ಟ್ ಆದೇಶ ಪಾಲಿಸಬೇಕು ಎಂದು ಪೊಲೀಸರು ತಾಕೀತು ಮಾಡಿದ ಬೆನ್ನಲ್ಲೇ ತಡರಾತ್ರಿ ವಿಸರ್ಜನೆ ವೇಳೆಯಲ್ಲಿ ಇಂತಹದೊಂದು ಗಲಾಟೆ ನಡೆದಿದೆ. ಈ ಬಗ್ಗೆ ಪೊಲೀಸ್ ಆಯುಕ್ತರು ಕೂಲಂಕಷವಾಗಿ ಪರಿಶೀಲಿಸಿ ಸೂಕ್ತ ನಿರ್ಧಾರವನ್ನು ಕೈಗೊಳ್ಳುವ ಮೂಲಕ ಆದೇಶ ನೀಡಬೇಕಿದೆ.

Edited By : Shivu K
Kshetra Samachara

Kshetra Samachara

08/09/2022 12:29 pm

Cinque Terre

42.07 K

Cinque Terre

19

ಸಂಬಂಧಿತ ಸುದ್ದಿ