ಧಾರವಾಡ: ಸತ್ಯಕ್ಕ ಹಾಗೂ ರುದ್ರಮ್ಮ ಎಂಬ ಇಬ್ಬರು ಮಹಿಳೆಯರು ಮಾತನಾಡಿದ ಆಡಿಯೋ ವಿಚಾರ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಮನಗುಂಡಿ ಗ್ರಾಮದ ಸತ್ಯಕ್ಕಳ ಮನೆಗೆ ಹೋಗಿ ಆಕೆಯ ಮನೆಯವರನ್ನು ವಿಚಾರಣೆ ನಡೆಸಿದ್ದಾರೆ.
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಸತ್ಯಕ್ಕಳ ಅಣ್ಣ ಮಂಜುನಾಥ, ಸತ್ಯಕ್ಕ ಹಾಗೂ ಆಡಿಯೋ ವಿಚಾರ ನಮಗೆ ಗೊತ್ತಿಲ್ಲ. ಸತ್ಯಕ್ಕ ಈಗ ನಮ್ಮ ಸಂಪರ್ಕದಲ್ಲೂ ಇಲ್ಲ ಎಂದಿದ್ದಾರೆ.
ಸತ್ಯಕ್ಕ ಹಾಗೂ ರುದ್ರಮ್ಮ ಎಂಬ ಮಹಿಳೆಯರು ಫೋನಿನ ಮೂಲಕ ಸಂಭಾಷಣೆ ನಡೆಸಿದ್ದಾರೆ. ಈ ಸಂಭಾಷಣೆಯಲ್ಲಿ ಸತ್ಯಕ್ಕ, ಯಾವ ಮಠದಲ್ಲೂ ಮಹಿಳೆಯರಿಗೆ ರಕ್ಷಣೆ ಇಲ್ಲ. ಎಲ್ಲ ಮಠಾಧೀಶರೂ ಅವರೇ ಎಂದು ಮನಗುಂಡಿಯ ಬಸವಾನಂದ ಸ್ವಾಮೀಜಿಗಳ ಹೆಸರನ್ನು ಪ್ರಸ್ತಾಪ ಮಾಡಿದ್ದಳು.
ಈ ಸಂಬಂಧ ನಿನ್ನೆಯಷ್ಟೇ ಬಸವಾನಂದ ಸ್ವಾಮೀಜಿ ಸ್ಪಷ್ಟೀಕರಣ ಕೊಟ್ಟಿದ್ದರು. ಇಂದು ಪೊಲೀಸರು ಮನಗುಂಡಿಯ ಸತ್ಯಕ್ಕ ಅವರ ಮನೆಗೆ ಹೋಗಿ ವಿಚಾರಣೆ ನಡೆಸಿದ್ದಾರೆ. ಆದರೆ, ಸತ್ಯಕ್ಕಳಿಗೂ ನಮಗೂ ಸಂಪರ್ಕವಿಲ್ಲ ಎಂದು ಆಕೆಯ ಅಣ್ಣ ಮಂಜುನಾಥ ತಿಳಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
06/09/2022 04:23 pm