ಹುಬ್ಬಳ್ಳಿ: ಜಮೀನಿನ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ಮುಖಂಡನೊಬ್ಬ ಬಿಜೆಪಿ ಕಾರ್ಪೊರೇಟರ್ ಮನೆಗೆ ನುಗ್ಗಿ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ್ದೂ ಅಲ್ಲದೆ ಜೀವ ಬೆದರಿಕೆ ಹಾಕಿರೋ ಘಟನೆ ಹುಬ್ಬಳ್ಳಿಯ ಕಸಬಾಪೇಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ತಡರಾತ್ರಿ ನಡೆದಿದೆ.
ಹೌದು...ಹೀಗೆ ಕಿಮ್ಸ್ ಆಸ್ಪತ್ರೆಯಲ್ಲಿ ನಿಂತು "ನಮಗೆ ಜೀವ ಬೆದರಿಕೆ ಇದೆ. ಪೊಲೀಸ್ ಕಮಿಷನರ್ ರಕ್ಷಣೆ ಕೊಡಬೇಕು" ಎಂದು ಮಾಧ್ಯಮದವರ ಮುಂದೆ ಅಳಲು ತೋಡಿಕೊಳ್ಳುತ್ತಿರೋ ಇವರು ವಾರ್ಡ್ ನಂ. 72ರ ಕಾರ್ಪೊರೇಟರ್ ಸುಮಿತ್ರಾ ಗುಂಜಾಳ ಹಾಗೂ ಅವರ ಕುಟುಂಬದವರು.
ಭಾನುವಾರ ರಾತ್ರಿ ಗುಂಜಾಳ ಕುಟುಂಬದವರು ಗಣೇಶ ವಿಸರ್ಜನೆ ಮಾಡಿ ಜಂಗ್ಲಿಪೇಟ್ ನಲ್ಲಿರುವ ತಮ್ಮ ಮನೆಯಲ್ಲಿ ಕುಳಿತಿದ್ದಾಗ, ಕಾಂಗ್ರೆಸ್ ಮುಖಂಡ ಗಿರೀಶ ಗದಿಗೆಪ್ಪಗೌಡ ನಾಲ್ಕು ಜನರ ಸಮೇತ ಮನೆಗೆ ನುಗ್ಗಿ ಜಮೀನಿನ ವಿಚಾರಕ್ಕೆ ಕ್ಯಾತೆ ತೆಗೆದು ಕಾರ್ಪೊರೇಟರ್ ಸುಮಿತ್ರಾ ಗುಂಜಾಳ ಸೇರಿದಂತೆ ಗೌರಮ್ಮ, ಭಾಗ್ಯಶ್ರೀ, ವೀರಮ್ಮ ಹಾಗೂ ಬಸವರಾಜ ಎಂಬವರಿಗೆ ಅವಾಚ್ಯವಾಗಿ ನಿಂದಿಸಿ, ಹಲ್ಲೆ ಮಾಡಿ ಜೀವ ಬೆದರಿಕೆ ಒಡ್ಡಿದ್ದಾನೆ ಅಂತಾ ಮಾಧ್ಯಮದ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಹಲ್ಲೆಗೊಳಗಾದ 6 ಮಂದಿ ಹುಬ್ಬಳ್ಳಿಯ ಕಸಬಾಪೇಟ ಪೊಲೀಸರಿಗೆ ಘಟನೆಯ ಮಾಹಿತಿ ನೀಡಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ನಮ್ಮ ಜೀವಕ್ಕೆ ಭದ್ರತೆ ಕೊಡಿಸಿ ಅಂತಾ ಕಾರ್ಪೊರೇಟರ್ ಕುಟುಂಬದವರು ಕಣ್ಣೀರು ಹಾಕಿದ್ದಾರೆ.
ಒಟ್ಟಿನಲ್ಲಿ ಕಾರ್ಪೊರೇಟರ್ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಲ್ಲದೆ ಜೀವ ಬೆದರಿಕೆ ಹಾಕಿದ ಗಿರೀಶ ಗದಿಗೆಪ್ಪಗೌಡರ
ಮೇಲೆ ಪೊಲೀಸ್ ಕಮಿಷನರ್ ಲಾಬೂರಾಮ್ ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
- ವಿನಯ ರೆಡ್ಡಿ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
Kshetra Samachara
05/09/2022 09:44 pm