ಹುಬ್ಬಳ್ಳಿ: ಭೂಗತ ಪಾತಕಿ ಬಚ್ಚಾಖಾನ್ ಸರಸ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಬೇಲಿಯೇ ಎದ್ದು ಹೊಲ ಮೇಯ್ದ ಪ್ರಕರಣಕ್ಕೆ ಹೊಸ ಆಯಾಮ ಸಿಕ್ಕಿದೆ. ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ ಎಂಬುವಂತ ಗಂಭೀರ ವಿಷಯವೊಂದು ಬೆಳಕಿಗೆ ಬಂದಿದ್ದು, ಭೂಗತ ಪಾತಕಿಯ ಬೆನ್ನಿಗೆ ನಿಂತ್ರಾ ಅವಳಿನಗರದ ಪೊಲೀಸರು.? ಎನ್ನುವ ಅನುಮಾನ ಹುಟ್ಟಿಕೊಂಡಿದೆ..
ಮೊನ್ನೆ ಮೊನ್ನೆಯಷ್ಟೇ ಧಾರವಾಡದಲ್ಲಿ ಬಚ್ಚಾಖಾನ್ ನಿಂದ ಲಂಚ ಪಡೆದು ಪ್ರೇಯಸಿ ಜೊತೆ ಸರಸಕ್ಕೆ ಪೊಲೀಸರು ಅವಕಾಶ ಮಾಡಿಕೊಟ್ಟಿದ್ದರು. ಬಳ್ಳಾರಿ ಜೈಲ್ ನಿಂದ ಧಾರವಾಡ ಕೋರ್ಟ್ ಗೆ ಕರೆದುಕೊಂಡು ಬರಲಾಗಿತ್ತು. ಕೋರ್ಟ್ ನಿಂದ ವಾಪಸ್ ಕರೆದುಕೊಂಡು ಹೋಗುವಾಗ ಧಾರವಾಡದ ಸತ್ತೂರ ಬಳಿಯ ಪ್ರಕೃತಿ ಲಾಡ್ಜ್ ನಲ್ಲಿ ಸರಸಕ್ಕೆ ಅನುವು ಮಾಡಿಕೊಟ್ಟಿದ್ದರು. ಬಚ್ಚಾಖಾನ್ ಪ್ರೇಯಸಿ ಮೊದಲೇ ರೂಮ್ ಬುಕ್ ಮಾಡಿ ಕಾಯುತ್ತಿದ್ದಳು. ಬಚ್ಚಾಖಾನ್‌ನ್ನನ್ನು ಒಳಕ್ಕೆ ಬಿಟ್ಟು ಬಳ್ಳಾರಿ ಪೊಲೀಸ್ ಹೊರಗಡೆ ಕಾವಲಿಗಿದ್ದರು. ಈ ಖಚಿತ ಮಾಹಿತಿ ಆಧರಿಸಿ ಪ್ರಕೃತಿ ಲಾಡ್ಜ್ ಮೇಲೆ ಪೊಲೀಸ್ ಆಯುಕ್ತ ಲಾಭೂರಾಮ್ ಸೂಚನೆಯಿಂತೆ ಸಿಬ್ಬಂದಿಗಳು ಆ್ಯಂಡ್ ಟೀಮ್ ದಾಳಿ ನಡೆಸಿದ್ದರು. ಈ ದಾಳಿ ನಂತರ ಇಡೀ ಪ್ರಕರಣಕ್ಕೆ ವಿದ್ಯಾಗಿರಿ ಪೊಲೀಸರು ಹೊಸ ಕಥೆ ಕಟ್ಟಿದ ಎಫ್‌ಐಆರ್ ದಾಖಲು ಮಾಡಿದ್ದಾರೆ. ಬಳ್ಳಾರಿ ಜೈಲ್ ಪೊಲೀಸರ ರಕ್ಷಣೆಗೆ ಅವಳಿನಗರ ಪೊಲೀಸರು ನಿಂತಿದ್ದಾರೆ ಎಂಬುವಂತ ಅನುಮಾನ ಹುಟ್ಟಿಕೊಂಡಿದೆ.
ಇನ್ನೂ ಬಳ್ಳಾರಿ ಪೊಲೀಸರ ರಕ್ಷಣೆಗಾಗಿ ಹೊಸ ಕಥೆ ಸೃಷ್ಟಿಸಿದ್ದು, ನಟೋರಿಯಸ್ ಟೆರರಿಸ್ಟ್ ಯೂಸೂಪ್ ಬಚ್ಚಾಖಾನ್ ಮೇಲೆ ಪ್ರಕರಣ ದಾಖಲಾಗಿತ್ತು. ಜೈಲ್ ಗೆ ಕರೆದುಕೊಂಡು ಹೋಗುವಾಗ ತಪ್ಪಿಸಿಕೊಳ್ಳಲು ಯತ್ನ ದೂರು ಪಡೆದುಕೊಂಡಿದ್ದಾರೆ. ಕೋರ್ಟ್ ನಿಂದ ಕರೆದುಕೊಂಡು ಹೋಗುವಾಗ ತಪ್ಪಿಸಿಕೊಳ್ಳುವ ಯತ್ನಿಸಿದ್ದಾನೆ. ಧಾರವಾಡ ಕೋರ್ಟ್ ನಿಂದ ಬಳ್ಳಾರಿ ಜೈಲ್ ಗೆ ಬಚ್ಚಾಖಾನ್ ರವಾನೆ ಮಾಡಲಾಗುತಿತ್ತು. ಈ ಸಂದರ್ಭದಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆಂದು ಬಳ್ಳಾರಿ ಕಾರಾಗೃಹದ ಪೊಲೀಸರು ವಿದ್ಯಾಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ್ವಯ ಬಚ್ಚಾಖಾನ್ ಸೇರಿದಂತೆ ಆತನ ಮೂವರು ಸಹಾಯಕರ ವಿರುದ್ಧ ದೂರು ದಾಖಲಾಗಿದೆ.
ನಿಜಕ್ಕೂ ಭೂಗತ ಪಾತಕಿ ಬಚ್ಚಾಖಾನ್ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ನಾ..? ತಪ್ಪಿಸಿಕೊಳ್ಳುವ ಭಾಗವಾಗಿ ಪ್ರಕೃತಿ ಲಾಡ್ಜ್ ನೊಳಕ್ಕೆ ಬಚ್ಚಾಖಾನ್ ನುಗ್ಗಿದ್ದನಾ..? ವೀರ ಯೋಧರಂತೆ ಬಳ್ಳಾರಿ ಪೊಲೀಸರು ಬಚ್ಚಾಖಾನ್‌ನ್ನನ್ನು ಹಿಡಿದ್ರಾ. ಅಪರಾಧಿಗೆ ಪೊಲೀಸರು ಕೊಟ್ಟಿರುವ ಸೆಕ್ಯೂರಿಟಿ ಮೇಲೆ ಅನುಮಾನ ವ್ಯಕವಾಗಿದೆ. ಹೀಗಾದರೇ ವೀರ ಯೋಧರಂತೆ ಸೆಣಸಾಡಿದ ಬಳ್ಳಾರಿ ಪೊಲೀಸರನ್ನೇಕೆ ಅಮಾನತು ಮಾಡಿದ್ದಾರೆ. ಪೊಲೀಸರ ಮಾನ ಮರ್ಯಾದೆ ಉಳಿಸಿಕೊಳ್ಳಲು ನಾಟಕವಾಡಿದ್ರಾ. ಇದೆಕ್ಕೆಲ್ಲಾ ಉತ್ತರ ಸಿಗಬೇಕಾದ್ರೆ ಪ್ರಕೃತಿ ಲಾಡ್ಜ್ ನಲ್ಲಿರುವ ಸಿಸಿ ಟಿವಿ ದೃಶ್ಯಗಳನ್ನು ಬಿಡುಗಡೆ ಮಾಡಬೇಕಿದೆ. ಎಫ್ ಐ ಆರ್ ನಂತೆ ಘಟನೆ ನಡೆದರೆ ಸಿಸಿಟಿವಿ ದೃಶ್ಯ ಮಾಡಿದ್ರೆ ನಿಜವಾದ ಸತ್ಯ ಹೊರಬರುತ್ತದೆ. ಇನ್ನೂ ಬಚ್ಚಾಖಾನ್, ಗ್ಯಾಂಗ್ಸ್ಟರ್, ಉಗ್ರಗಾಮಿ, ಶಿಕ್ಷೆ ಆಗಿರುವ ಅಪರಾಧಿ. ಮೈಸೂರು ಜೈಲಿನಲ್ಲಿದ್ದುಕೊಂಡೆ 2020 ರಲ್ಲಿ ಪ್ರುಟ್ ಇರ್ಪಾನ್ ಕೊಲೆ ಮಾಡಿಸಿದ್ದ. ಮೊಬೈಲ್ ನಲ್ಲಿ ಸ್ಕೆಚ್ ಹಾಕಿ ಮುಂಬೈ ಶಾರ್ಪ್ ಶೂಟರ್ಗಳಿಂದ ಹತ್ಯೆ ಮಾಡಿಸಿದ್ದ. ಈತನ ಮೇಲೆ ಐಪಿಸಿ 212 ಹಾಗೂ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ದೂರು ಕೊಡಬಹುದು. ಬಳ್ಳಾರಿ ಜೈಲ್ ಸಿಬ್ಬಂಧಿ ವಿರುದ್ಧ ಸ್ಥಳೀಯ ಎಫ್ ಐ ಆರ್ ಮಾಡಬಹುದಿತ್ತು. ಆದರೆ ಭ್ರಷ್ಟ ಪೊಲೀಸರಿಂದಲೇ ದೂರು ಪಡೆದು ಎಫ್ ಐ ಆರ್ ದಾಖಲು ಮಾಡಲಾಗಿದೆ.
ಈ ಎಲ್ಲಾ ನಾಟಕಗಳು ಪೊಲೀಸ್ ಆಯುಕ್ತ ಲಾಭೂರಾಮ್ ಅವರಿಗೆ ಗೊತ್ತಿಲ್ಲವೇ. ಒಂದು ವೇಳೆ ಗೋತ್ತಾದ್ರೂ ಸೈಲೆಂಟ್ ಇರುವುದು ಏಕೆ..? ಈ ಘಟನೆಯಲ್ಲಿ ನಿಜವಾಗಿಯೂ ಆಗಿದ್ದು ಏನೂ ಎಂಬುದರ ಬಗ್ಗೆ ಪೊಲೀಸ್ ಆಯುಕ್ತರಿಂದಲೇ ಉತ್ತರ ಸಿಗಬೇಕಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
23/08/2022 06:51 pm