ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಇನ್ನೋವಾ ಕಾರುಕಳ್ಳನನ್ನು ಚೇಸ್ ಮಾಡಿ ಹಿಡಿದ ಪೊಲೀಸರು!

ಕಲಘಟಗಿ: ಗೋವಾದಿಂದ ಇನ್ನೋವಾ ಕಾರನ್ನು ಕಳ್ಳತನ ಮಾಡಿಕೊಂಡು ತೆಲಂಗಾಣಕ್ಕೆ ಪರಾರಿಯಾಗುತ್ತಿದ್ದ ಕಾರು ಕಳ್ಳನ್ನನ್ನು ಸಿನಿಮೀಯ ಶೈಲಿಯಲ್ಲಿ ಚೇಸ್ ಮಾಡಿ ಪೊಲೀಸರು ಹಿಡಿದಿರುವ ಪ್ರಕರಣವೊಂದು ಕಲಘಟಗಿ ತಾಲೂಕಿನ ಚಳಮಟ್ಟಿ ಬಳಿ ಸಂಭವಿಸಿದೆ.

ಗೋವಾದಿಂದ ಇನ್ನೋವಾ ಕಾರು ಕಳ್ಳತನ ಮಾಡಿದ್ದ ತೆಲಂಗಾಣ ಮೂಲದ ಕಿರಣ ಅಲಿಯಾಸ್ ನುಗ್ಲು ತಿರುಪತಿ,ಇನ್ನೋವಾ ವಾಹನವನ್ನ ಕರ್ನಾಟಕದ ಮೂಲಕ ಪರಾರಿಯಾಗುತ್ತಿದ್ದಾನೆಂಬ ಮಾಹಿತಿ ಸಿಗುತ್ತಿದ್ದ ಹಾಗೇ ಎಲ್ಲ ಕಡೆಯೂ ಪೊಲೀಸರು ಅಲರ್ಟ್ ಆಗಿದ್ದರು.

ಮಾರ್ಗ ಬದಲಿಸಿ ಚಳಮಟ್ಟಿ ಬಳಿ ಇನ್ನೋವಾ ಕಂಡೊಡನೆ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀಶೈಲ ಕೌಜಲಗಿ ತಂಡ ಬೆನ್ನು ಬಿದ್ದು ಸುಮಾರು ಏಳೆಂಟು ಕಿಲೋಮೀಟರ್ ನಂತರ ವಾಹನದ ಸಮೇತ ಆರೋಪಿಯನ್ನ ಬಂಧಿಸಿದ್ದಾರೆ.

Edited By :
Kshetra Samachara

Kshetra Samachara

04/08/2022 04:27 pm

Cinque Terre

21.51 K

Cinque Terre

0

ಸಂಬಂಧಿತ ಸುದ್ದಿ