ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸ್ನೇಹಿತನಿಗೆ ಕಾರು ಕೊಡುವ ಮುನ್ನ ಎಚ್ಚರ!

ಹುಬ್ಬಳ್ಳಿ: ಊರಿಗೆ ಹೋಗಿ ಬರುವುದಾಗಿ ಸ್ನೇಹಿತನ ಕಾರು ಪಡೆದು, ಕಾರನ್ನು ವಾಪಸ್ ಕೊಡದೆ ಒತ್ತೆ ಇಟ್ಟು ನಾಲ್ಕು ವರ್ಷದಿಂದ ಸತಾಯಿಸುತ್ತಿದ್ದ ಆರೋಪಿಯನ್ನು ನಗರದ ಗೋಕುಲರೋಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಿಶೋರ್ ವಿವೇಕಾನಂದ ಅಣವೇಕರ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದು ಆತನಿಂದ ಕಾರು ಜಪ್ತ ಮಾಡಿದ್ದಾರೆ. 2019 ರಲ್ಲಿ ಬಸವರಾಜ ಗೌರಕ್ಕನವರ ಎಂಬುವರಿಂದ ಕಾರನ್ನು ಕಿಶೋರ ಪಡೆದಿದ್ದ.

ನಂತರ ಅದನ್ನು ಬೇರೆಯವರಿಗೆ ಒತ್ತೆ ಇಟ್ಟು ಹಣ ಪಡೆದಿದ್ದು ಕಾರು ಕೊಡದೇ ಸತಾಯಿಸುತ್ತಿದ್ದ. ಗೋಕುಲ ರೋಡ್ ಠಾಣೆ ಇನ್ಸ್ಪೆಕ್ಟರ್ ಜೆ.ಎಂ.ಕಾಲಿಮಿರ್ಚಿ ಹಾಗೂ ಸಿಬ್ಬಂದಿ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Edited By :
Kshetra Samachara

Kshetra Samachara

01/08/2022 09:04 pm

Cinque Terre

21.73 K

Cinque Terre

0

ಸಂಬಂಧಿತ ಸುದ್ದಿ