ಹುಬ್ಬಳ್ಳಿ: ಇಂದು ಬೆಳ್ಳಿಗ್ಗೆ ಗಿರಿಯಾಲ್ ರಸ್ತೆಯಲ್ಲಿ ಸುಮಾರು 30 ರಿಂದ 35 ವರ್ಷದ ಮಹಿಳೆಯೊಬ್ಬಳು ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದಿದ್ದನ್ನು ಕಂಡು ಮಹಿಳೆ ಕೊಲೆಯಾಗಿದ್ದಾಳೆ ಎಂದು ಗ್ರಾಮಸ್ಥರು ಹುಬ್ಬಳ್ಳಿಯ ಗ್ರಾಮೀಣ ಪೊಲೀಸರಿಗೆ ಮಾಹಿತಿಯನ್ನು ರವಾನಿಸಿದ್ದರು.
ಕೂಡಲೇ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದಾಗ ಮಹಿಳೆ ಅಸ್ವಸ್ಥ ಸ್ಥಿತಿಯಲ್ಲಿರೋದು ಪೊಲೀಸರಿಗೆ ಕಂಡು ಬಂದಿದ್ದು,ಮಹಿಳೆಯನ್ನು ವಿಚಾರಣೆ ನಡೆಸಿದಾಗ ಮಹಿಳೆ ನವಲೂರು ಗ್ರಾಮದ ನೀಲವ್ವ ವಾಡೆಕಾರ ಅಂತಾ ತಿಳಿದು ಬಂದಿದೆ.ಮಹಿಳೆಯನ್ನು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ನೀಲವ್ವ ನವಲೂರಿನ ತನ್ನ ಮನೆಯಿಂದ ನಾಪತ್ತೆಯಾಗಿದ್ದಳು.ಇತ್ತ ಮನೆಯವರು ನಾಪತ್ತೆಯಾದ ಮಹಿಳೆ ನೀಲವ್ವನ ಪತ್ತೆಗಾಗಿ ವಿದ್ಯಾಗಿರಿ ಪೊಲೀಸರಿಗೆ ಮಾಹಿತಿಯನ್ನು ನೀಡಿ ತಾವು ಹುಡುಕಾಟದಲ್ಲಿ ತೊಡಗಿದ್ದರು.
ಸದ್ಯ ಇಂದು ಬೆಳಗಿನ ಜಾವ ಗಿರಿಯಾಲ್ ಬಳಿ ನೀಲವ್ವ ಸಿಕ್ಕ ಮಾಹಿತಿಯನ್ನು ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಆಕೆಯ ಕುಟುಂಬದವರಿಗೆ ತಿಳಿಸಿದ್ದಾರೆ.
Kshetra Samachara
31/07/2022 09:19 am