ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹೆಚ್ಚಿನ ಹಣ ಗಳಿಕೆ ಆಸೆ ತೋರಿಸಿ ಬರೊಬ್ಬರಿ 1.15 ಲಕ್ಷರೂ. ವಂಚನೆ!

ಹುಬ್ಬಳ್ಳಿ: ಅಪರಿಚಿತ ವ್ಯಕ್ತಿಯೊಬ್ಬ ಪ್ರತಿದಿನ ಹೆಚ್ಚಿನ ಹಣ ಗಳಿಸಬಹುದೆಂದು ಆಸೆ ತೋರಿಸಿ, ಟೆಲಿಗ್ರಾಂ ಐಡಿಯಲ್ಲಿ ಸೂಚನೆ ಕೊಡುತ್ತ 1,15,100 ರೂ. ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ.

ಗದಗ ರೋಡ್ ಸಿದ್ದಗಂಗಾ ಲೇಔಟ್‌ನ ಜಿ. ಕೃಷ್ಣನ್ ಎಂಬುವವರೆ ವಂಚನೆಗೆ ಒಳಗಾದವರು, ಮನೆಯಲ್ಲೇ ಕುಳಿತು ಕೆಲಸ ಮಾಡಿದರೆ ಪ್ರತಿದಿನ 20 ಸಾವಿರ ರೂ. ಗಳಿಸಬಹುದೆಂದು ಮೊಬೈಲ್‌ಗೆ ಸಂದೇಶ ಕಳುಹಿಸಿದ್ದಾರೆ.

ಸಂಪರ್ಕಿಸಿದಾಗ ವೈಯಕ್ತಿಕ ಮಾಹಿತಿ ಪಡೆದು, ಲಿಂಕ್ ಕಳುಹಿಸಿ ಅದರಲ್ಲಿ ನೋಂದಾಯಿಸಿ, ಟೆಲಿಗ್ರಾಂ ಐಡಿಯಲ್ಲಿ ಸೂಚನೆಗಳನ್ನು ಕೊಡುತ್ತ, ಅವರ ಖಾತೆಯಿಂದ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಈ ಕುರಿತು ಸಿಇಎನ್ ಕೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : PublicNext Desk
Kshetra Samachara

Kshetra Samachara

29/07/2022 10:32 am

Cinque Terre

20.91 K

Cinque Terre

0

ಸಂಬಂಧಿತ ಸುದ್ದಿ