ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬೇಂದ್ರೆ ಬಸ್‌ನಲ್ಲಿ ಕಿಸೆಗಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳರ ಬಂಧನ

ಹುಬ್ಬಳ್ಳಿ: ಅವಳಿ ನಗರದ ನಡುವೆ ಸಂಚರಿಸುವ ಬೇಂದ್ರೆ ಬಸ್‌ಗಳಲ್ಲಿ ಕಿಸೆಗಳ್ಳತನ ಮಾಡುತ್ತಿದ್ದ ಇಬ್ಬರು ಖತರ್ನಾಕ್ ಕಳ್ಳರನ್ನು ವಿದ್ಯಾನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಸೆಟ್ಲಿಮೆಂಟ್‌ನ ಮಂಜುನಾಥ ಬೆಳ್ಳಿಗಟ್ಟಿ ಹಾಗೂ ಅಶೋಕ ಕನ್ನೆಶ್ವರ ಈ ಇಬ್ಬರು ಎಪಿಎಂಸಿ, ವಿದ್ಯಾನಗರ ಹಾಗೂ ಎಸ್‌ಡಿಎಂ ಬಳಿಯಲ್ಲಿ ಹತ್ತುವ ಪ್ರಯಾಣಿಕರನ್ನು ಟಾರ್ಗೆಟ್ ಮಾಡಿ ಚಾಣಾಕ್ಷತನದಿಂದ ಪಿಕ್ ಪ್ಯಾಕೆಟ್ ಮಾಡಿ ಅಲ್ಲಿಂದ ಪರಾರಿಯಾಗುತ್ತಿದ್ದರು.

ಪಿಕ್ ಪ್ಯಾಕೆಟ್ ಮಾಡಿದ ಹಣದಿಂದ ಕೆಲವು ದಿನಗಳ ಕಾಲ ಮೋಜು ಮಸ್ತಿ ಮಾಡಿ ದುಡ್ಡು ಖಾಲಿಯಾದಾಗ ಮತ್ತೇ, ಪಿಕ್ ಪ್ಯಾಕೆಟ್ ಮಾಡುವ ಕಾಯಕವನ್ನು ಮುಂದುವರೆಸುತ್ತಿದ್ದರು. ಆರೋಪಿಗಳ ಬಗ್ಗೆ ಖಚಿತ ಮಾಹಿತಿ ಸಿಕ್ಕಿದ್ದೇ ತಡ ವಿದ್ಯಾನಗರ ಠಾಣೆಯ ಇನ್ಸ್ಪೆಕ್ಟರ್ ಸಂತೋಷ ಪವಾರ್ ನೇತೃತ್ವದ ತಂಡ ಹೊಸೂರು ಬಳಿಯಲ್ಲಿ ಆರೋಪಿಗಳನ್ನು ಅರೆಸ್ಟ್ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Edited By : Shivu K
Kshetra Samachara

Kshetra Samachara

28/07/2022 10:09 am

Cinque Terre

52.94 K

Cinque Terre

11

ಸಂಬಂಧಿತ ಸುದ್ದಿ