ಕುಂದಗೋಳ : ಪಟ್ಟಣದ ವಿವಿಧ ಇಲಾಖೆಗಳ ಸರ್ಕಾರಿ ಸಂಕೀರ್ಣ ಕಟ್ಟಡದಲ್ಲಿ ಅಳವಡಿಸಿದ ಆಧಾರ್ ಸೇವಾ ಕೇಂದ್ರದ ಬ್ಯಾನರ್ ಹಾಗೂ ಒಳಗಡೆ ನಿಲ್ಲಿಸಿದ್ದ ಸ್ಕೂಟಿಯೊಂದರ ಸೀಟ್ ಚಾಕುವಿನಿಂದ ಹರಿದು ಹಾಕಿದ ಘಟನೆ ಕಳೆದ ಶುಕ್ರವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಹೌದು ! ಕಳೆದ ಶುಕ್ರವಾರ ಸಾಯಂಕಾಲ ಸರ್ಕಾರಿ ಅಧಿಕಾರಿಗಳು ಕರ್ತವ್ಯ ಮುಗಿಸಿ ಮರಳಿದ್ದಾರೆ. ಈ ವೇಳೆ ಗೇಟ್ ಹಾಕಿದ ವಿವಿಧ ಇಲಾಖೆಗಳ ಸರ್ಕಾರಿ ಸಂಕೀರ್ಣ ಕಟ್ಟಡದ ಕಿಂಡಿಯಲ್ಲಿ ಕೈ ಹಾಕಿ ಯಾರೋ ಪುಡಾರಿಗಳು ಸ್ಕೂಟಿ ಸೀಟ್ ಹಾಗೂ ಆಧಾರ್ ಸೇವಾ ಕೇಂದ್ರದ ಬ್ಯಾನರ್ ಚೂರು ಚೂರು ಮಾಡಿ ಹರಿದು ಬಿಸಾಕಿದ್ದಾರೆ.
ಪುನಃ ಸೋಮವಾರ ಅಧಿಕಾರಿ ಸಿಬ್ಬಂದಿಗಳು ಗೇಟ್ ತೆರದಾಗಲೇ ವಿಷಯ ತಿಳಿದಿದ್ದರೂ ಸಹ ಯಾವುದೇ ದೂರನ್ನು ಪೊಲೀಸ್ ಠಾಣೆಗೆ ನೀಡಲು ಮುಂದಾಗಿಲ್ಲ. ಆದ್ರೇ ! ಯಾರು ವಿವಿಧ ಇಲಾಖೆಗಳ ಸರ್ಕಾರಿ ಸಂಕೀರ್ಣ ಕಟ್ಟಡಕ್ಕೆ ನುಗ್ಗಿದ್ದು ಯಾಕೆ ಬ್ಯಾನರ್ ಸ್ಕೂಟಿ ಸೀಟ್ ಬೆಲ್ಟ್ ಹರಿದರೂ ಎಂಬುದು ಯಾರಿಗೂ ಗೊತ್ತಿಲ್ಲಾ.
ಒಟ್ಟಾರೆ ವಿವಿಧ ಇಲಾಖೆಗಳ ಸರ್ಕಾರಿ ಸಂಕೀರ್ಣ ಕಟ್ಟಡದಲ್ಲೇ ಈ ಘಟನೆ ನಡೆದಿದ್ದು ಅಧಿಕಾರಿಗಳಲ್ಲಿ ಭಯ ತಂದಿದೆ.
Kshetra Samachara
27/07/2022 02:16 pm