ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಯಚೂರಲ್ಲಿ ನಾಪತ್ತೆಯಾಗಿದ್ದ ಕಾಲೇಜು ವಿದ್ಯಾರ್ಥಿನಿಯರು ಹುಬ್ಬಳ್ಳಿಯಲ್ಲಿ ಪತ್ತೆ

ಹುಬ್ಬಳ್ಳಿ: ರಾಯಚೂರಿನಲ್ಲಿ ನಾಪತ್ತೆಯಾಗಿದ್ದ ನಾಲ್ವರು ಕಾಲೇಜು ವಿದ್ಯಾರ್ಥಿನಿಯರ ಪೈಕಿ ಇಬ್ಬರು ಹುಬ್ಬಳ್ಳಿಯಲ್ಲಿ ಪತ್ತೆಯಾಗಿದ್ದಾರೆ.

ಇದೇ ಜುಲೈ 23ರಂದು ಕಾಲೇಜು ವಿದ್ಯಾರ್ಥಿನಿಯರು ರಾಯಚೂರಿನಿಂದ ನಾಪತ್ತೆಯಾಗಿದ್ದ ಸಂಬಂಧ ಅವರ ಪೋಷಕರು ರಾಯಚೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಕಿಡ್ನಾಪ್ ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕೆಲ ಮೂಲಗಳ ಪ್ರಕಾರ ಇಬ್ಬರು ಯುವತಿಯರು ಹುಬ್ಬಳ್ಳಿ ರೈಲ್ವೆ ಸ್ಟೇಷನ್‌ನಲ್ಲಿ ಇದ್ದಿದ್ದನ್ನು ಮಾಹಿತಿ ಪಡೆದ ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯ ಪೊಲೀಸರು, ರೈಲ್ವೆ ಪೊಲೀಸರ ಸಹಾಯದಿಂದ ಇಬ್ಬರ ವಿದ್ಯಾರ್ಥಿನಿಯರನ್ನು ರಕ್ಷಣೆ ಮಾಡಿದ್ದಾರೆ.

ಇನ್ನಿಬ್ಬರ ಯುವತಿಯರ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದಾರೆ. ಆ ಇಬ್ಬರು ಯುವತಿಯರ ಬಗ್ಗೆಯೂ ಮಾಹಿತಿ ಪಡೆದಿರುವ ಪೊಲೀಸರು ಪತ್ತೆ ಮಾಡುವ ಭರವಸೆ ನೀಡಿದ್ದಾರೆ. ಸದ್ಯ ಪತ್ತೆಯಾದ ಯುವತಿಯರು ಶಹರ ಠಾಣೆಯಲ್ಲಿದ್ದು ಪಾಲಕರಿಗೆ ಒಪ್ಪಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

Edited By : Vijay Kumar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

25/07/2022 06:03 pm

Cinque Terre

54.1 K

Cinque Terre

3

ಸಂಬಂಧಿತ ಸುದ್ದಿ