ಧಾರವಾಡ: ಕಳೆದ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯೋರ್ವ ಶವವಾಗಿ ಪತ್ತೆಯಾಗಿರುವ ಘಟನೆ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ನಡೆದಿದೆ.
ಉಪ್ಪಿನ ಬೆಟಗೇರಿ ಗ್ರಾಮದ ಅಬ್ದುಲ್ ಖಾದರ್ ಮದ್ನಿ (80) ಎಂಬಾತನೇ ಮೃತಪಟ್ಟ ವ್ಯಕ್ತಿ.
ಮಾನಸಿಕ ಅಸ್ವಸ್ಥನಾಗಿದ್ದ ಈತ ಕಳೆದ ಭಾನುವಾರ ಬೆಳಗಿನ ಜಾವ ಮನೆಯಿಂದ ಹೊರ ಹೋಗಿದ್ದು, ಹಳ್ಳದಲ್ಲಿ ಈತ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಹಳ್ಳದಲ್ಲಿ ಬಿದ್ದಿದ್ದ ಈತ ಹನುಮನಹಾಳ ಗ್ರಾಮದ ಬಳಿ ಇರುವ ಹಿರೇಹಳ್ಳದಲ್ಲಿ ಪತ್ತೆಯಾಗಿದ್ದಾನೆ. ಶವ ಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಶವ ನೋಡಿದ ಸ್ಥಳೀಯರು ಕೂಡಲೇ ಗರಗ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಸ್ಥಳಕ್ಕೆ ಬಂದ ಪೊಲೀಸರು ಶವವನ್ನು ಮೇಲೆತ್ತಿದ್ದಾರೆ.
ಸ್ವತಃ ಗರಗ ಠಾಣೆ ಪಿಎಸ್ಐ ಮಲ್ಲಿಕಾರ್ಜುನ ಸತ್ತಿಗೌಡರ ಅವರೇ ಸಮವಸ್ತ್ರ ಬಿಚ್ಚಿಟ್ಟು ನೀರಿಗೆ ಧುಮುಕಿ ಶವವನ್ನು ಮೇಲೆತ್ತುವ ಕೆಲಸ ಮಾಡಿದರು.
ಸ್ಥಳಕ್ಕೆ ಮೃತ ವ್ಯಕ್ತಿಯ ಕುಟುಂಬಸ್ಥರೂ ಭೇಟಿ ನೀಡಿ ಶವವನ್ನು ಗುರುತು ಪತ್ತೆ ಮಾಡಿದ್ದಾರೆ.
Kshetra Samachara
19/07/2022 08:25 pm