ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹಳೇ ಬಸ್ ನಿಲ್ದಾಣದಲ್ಲಿ ಟೀ ಕುಡಿಯಲು ಬಂದು ರಕ್ತ ಹರಿಸಿದ ಚಾಲಕರು: ಕೇಸ್ ದಾಖಲು

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ರಾತ್ರಿ ಹೊತ್ತು ತಿನ್ನಲು ಕುಡಿಯಲು ಏನಾದ್ರೂ ಸಿಗುತ್ತೆ ಅಂದರೆ ಅದು ಹಳೇ ಬಸ್ ನಿಲ್ದಾಣದ ಪ್ರದೇಶದಲ್ಲಿ ಮಾತ್ರ. ಪೊಲೀಸರ ಅಲಿಖಿತ ಪರವಾನಿಗೆ ಅಂಗಡಿಗಳಿಗೆ ರಾತ್ರಿ ಹೊತ್ತು ಪುಂಡ ಪೋಕರಿಗಳೆ ಹೆಚ್ಚಾಗಿ ಬರುತ್ತಾರೆ. ಸದ್ಯ ಇವೆ ಈಗ ಕ್ರೈಂ ಹೆಚ್ಚಾಗಲು ಕಾರಣ ಕೂಡಾ ಆಗಿದೆ ಎನ್ನಲಾಗುತ್ತಿದೆ.

ಕಳೆದ ರಾತ್ರಿ ಕೂಡ ಟೀ ಹಾಗೂ ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳ ಪರಸ್ಪರ ಆಯುಧ ಹಿಡಿದು ಹೊಡೆದಾಡುವ ಮಟ್ಟಕ್ಕೆ ಹೋಗಿದೆ. ಹೊಡೆದಾಟದಲ್ಲಿ ಗಾಯಗೊಂಡ ಮೂವರನ್ನು ಪೊಲೀಸರು ಕಿಮ್ಸ್‌ಗೆ ದಾಖಲಿಸಿದ್ದಾರೆ.

ಟಾಟಾ ಏಸ್ ಚಾಲಕ ರೋಹಿತ್, ಉಮೇಶ್ ಹಾಗೂ ಆಟೋ ಚಾಲಕ ಅನಿಲ ರಾವ್ ಹೊಡೆದಾಡಿಕೊಂಡವರು. ಮೂವರು ಕೂಡ ಹುಬ್ಬಳ್ಳಿ ನಿವಾಸಿಗಳು. ಸಣ್ಣದೊಂದು ವಿಷಯಕ್ಕೆ ಕಿರಿಕ್ ತೆಗೆದು ಜಗಳ ಮಾಡಿದ್ದಾರೆ. ಮುಂದೆ ಒಬ್ಬರನೊಬ್ಬರು ಫಾಲೋ ಮಾಡಿ ಹೊಸೂರು ಕಲ್ಲೂರಿ ಪೆಟ್ರೋಲ್ ಪಂಪ್ ಮುಂಭಾಗದಲ್ಲಿ ಚಾಕು ಮತ್ತು ಕಬ್ಬಿನ ಸಲಾಕೆ ಹಿಡಿದು ಹಲ್ಲೆ ಮಾಡಿದ್ದಾರೆ. ಈ ಸಂಬಂಧ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.

Edited By : Vijay Kumar
Kshetra Samachara

Kshetra Samachara

03/07/2022 12:24 pm

Cinque Terre

42.1 K

Cinque Terre

2

ಸಂಬಂಧಿತ ಸುದ್ದಿ