ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕ್ರೆಡಿಟ್ ಕಾರ್ಡ್ ಮೂಲಕ 77 ಸಾವಿರ ರೂ. ವಂಚನೆ

ಹುಬ್ಬಳ್ಳಿ: ಲೋನ್ ಹೆಸರಿನಲ್ಲಿ ಜನರನ್ನು ವಂಚನೆ ಮಾಡುವ ಜಾಲ ಸಕ್ರಿಯವಾಗಿದ್ದು, ಝಿರೋ ಬಡ್ಡಿ ದರದಲ್ಲಿ ಹಣ ಪಡೆಯುವ ಉದ್ದೇಶದಿಂದ ಮಹಿಳೆಯೊಬ್ಬರು ಕ್ರೆಡಿಟ್ ಪಡೆದು ಪಿನ್ ಜನರೇಟ್ ಮಾಡದೇ ಇಟ್ಟುಕೊಂಡಿದ್ದರೂ, ಕ್ರೆಡಿಟ್ ಕಾರ್ಡ್ ಬಳಸಿ 77 ಸಾವಿರ ರೂ. ವಂಚನೆ ಮಾಡಿರುವ ಘಟನೆ ನಡೆದಿದೆ.

ಧಾರವಾಡದ ರೇಷ್ಮಾ ವಂಚನೆಗೊಳಗಾದವರು. ಧಾರವಾಡ ಪ್ರತಿಷ್ಠಿತ ಬ್ಯಾಂಕ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಉಳಿತಾಯ ಖಾತೆ ಇದ್ದವರು ಪ್ಲಿಫ್ ಕಾರ್ಟ್ ಕಾರ್ಡ್ ಪಡೆದುಕೊಂಡರೆ ಝಿರೋ ಬಡ್ಡಿ ದರದಲ್ಲಿ ಹಣ ಪಡೆಯಬಹುದು ಎಂದು ಫಲಕ ಹಾಕಲಾಗಿತ್ತು. ಇದನ್ನು ನೋಡಿ ಕಾರ್ಡ್‌ಗೆ ಅಪ್ಲೈ ಮಾಡಿ ಕ್ರೆಡಿಟ್ ಕಾರ್ಡ್ ಪಡೆದಿದ್ದರು. ಆದರೆ ಅದರ ಪಿನ್ ಜನರೇಟ್ ಸಹ ಮಾಡಿರಲಿಲ್ಲ. ಹೀಗಿದ್ದಾಗ್ಯೂ ವಂಚಕರು ಪ್ಲಿಫ್ ಕಾರ್ಟ್ ಬಳಿಸಿದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Vijay Kumar
Kshetra Samachara

Kshetra Samachara

29/06/2022 10:46 pm

Cinque Terre

20.82 K

Cinque Terre

0

ಸಂಬಂಧಿತ ಸುದ್ದಿ