ಹುಬ್ಬಳ್ಳಿ: ವಾಚ್ಮನ್ಗೆ ಹೊಡೆದು ಸುಮಾರು 3 ಲಕ್ಷಕ್ಕಿಂತ ಹೆಚ್ಚು ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡಿದ ಘಟನೆ ಸುಳ್ಳ ರಸ್ತೆಯ ಎಲ್ವಿನ್ ಹೆರಿಟೇಜ್ ಲೇಔಟ್ನಲ್ಲಿ ನಡೆದಿದೆ.
4-5 ಜನರ ಗುಂಪೊಂದು ಬೆಳಗಿನ ಜಾವ ವಾಚ್ಮನ್ಗೆ ಹೊಡೆದು, ಮೊಬೈಲ್ ಕಿತ್ತುಕೊಂಡು ಮನೆ ನಿರ್ಮಿಸಲು ತಂದಿಟ್ಟಿದ್ದ ಸುಮಾರು 3.20 ಲಕ್ಷ ರೂ. ಮೌಲ್ಯದ ಸಾಮಗ್ರಿಗಳನ್ನು ಕದ್ದುಕೊಂಡು ಹೋಗಿದ್ದಾರೆ. ಉದ್ಯಮಿ ರವಿ ಎಂಬುವರು ಮನೆ ನಿರ್ಮಿಸಲೆಂದು ತಂದಿಟ್ಟಿದ್ದ 11 ಸಾಗವಾನಿ ಕಿಟಕಿಗಳು, ಕಬ್ಬಿಣದ ರಾಡ್, 350 ಕೆಜಿ ಕಬ್ಬಿಣ, 2 ಬೈಂಡಿಂಗ್ ವೈರ್, ಕಟಿಂಗ್ ಮಷಿನ್, ವಾಟರ್ ಪಂಪ್, 3 ಪ್ಲಾಸ್ಟಿಕ್ ಕುರ್ಚಿಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಕುರಿತು ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
29/06/2022 01:18 pm