ಹುಬ್ಬಳ್ಳಿ: ವಿದ್ಯಾರ್ಥಿಯೊಬ್ಬನಿಗೆ ಅಪರಿಚಿತರು ಡಿಮಾರ್ಟ್ ಪ್ಲಾಟ್‌ಫಾರ್ಮ್‌ದಲ್ಲಿ ಹಣ ಹೂಡಿಕೆ ಮಾಡಿ, ದುಪ್ಪಟ್ಟು ಲಾಭ ಗಳಿಸಬಹುದೆಂದು ಆಸೆ ತೋರಿಸಿ ಬರೊಬ್ಬರಿ 3.21 ಲಕ್ಷ ರೂ. ಹಣ ಹೂಡಿಕೆ ಮಾಡಿಸಿಕೊಂಡ ವಂಚನೆ ಮಾಡಿದ್ದಾರೆ.
ನ್ಯೂ ಇಂಗ್ಲಿಷ್ ಸ್ಕೂಲ್ ಬಳಿಯ ಕುಂಬಾರ ಓಣಿಯ ಅಮಿತಸಿಂಗ್ ಎಂಬ ವಿದ್ಯಾರ್ಥಿ ಮೋಸ ಹೋಗಿದ್ದಾರೆ. ಇವರ ಮೊಬೈಲ್‌ಗೆ ವಂಚಕರು ಪ್ರತಿ ದಿವಸ 500 ರಿಂದ 5 ಸಾವಿರ ರೂ. ಗಳಿಸಲು ಡಿಮಾರ್ಟ್ ಪ್ಲಾಟ್‌ಫಾರ್ಮ್ ದಲ್ಲಿ ಹಣ ಹೂಡಿಕೆ ಮಾಡಬಹುದು. ಆಸಕ್ತಿ ಇದ್ದರೆ ಹೆಸರು, ವಿಳಾಸ, ಇತರೆ ಮಾಹಿತಿ ಕೊಡಿ ಎಂದು ಸಂದೇಶ ಕಳುಹಿಸಿದ್ದಾರೆ. ಇದನ್ನು ನಂಬಿದಾಗ ಅಪರಿಚಿತರು ಲಿಂಕ್ ಕಳುಹಿಸಿದ್ದಾರೆ.
ಅದರ ಸಹಾಯದಿಂದ ಹಣ ಹೂಡಿಕೆ ಮಾಡಿಸಿಕೊಂಡು ಲಾಭ ತೋರಿಸಿದ್ದಾರೆ. ಅದನ್ನು ವಿತ್ ಡ್ರಾ ಮಾಡಿಕೊಳ್ಳಲು ಹೋದಾಗ ಹಣ ಫ್ರೀಜ್ ಆದಂತೆ ತೋರಿಸಿ ಮತ್ತೆ ಹಂತ ಹಂತವಾಗಿ ಹಣ ಹೂಡಿಕೆ ಮಾಡಿಸಿಕೊಂಡು , ಈ ಹಣ ವಿತ್ ಡ್ರಾ ಮಾಡಿಕೊಳ್ಳಲು ರಿಫಂಡೇಬಲ್ ಟ್ಯಾಕ್ಸ್ ಸೆಕ್ಯೂರಿಟಿ ಹಣ , ವೆರಿಫಿಕೇಶನ್ ಚಾರ್ಜ್ ಎಂದು ಹಂತ ಹಂತವಾಗಿ ಒಟ್ಟು 3,21,762 ರೂ . ವರ್ಗಾಯಿಸಿಕೊಂಡು ವಂಚಿಸಿದ್ದಾರೆ . ಸಿಇಎನ್ ಕೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
29/06/2022 12:54 pm