ನವಲಗುಂದ: ಸಾಲಬಾಧೆ ತಾಳಲಾರದೇ ಮನನೊಂದು ರೈತನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮೊರಬ ಗ್ರಾಮದಲ್ಲಿ ಜರುಗಿದೆ.
ಮಹಾಂತೇಶ್ ಮಲ್ಲಪ್ಪ ಮೂದೆಮ್ಮಣ್ಣವರ (35) ಮೃತವ್ಯಕ್ತಿ ತನ್ನಸ್ವಂತ ಜಮೀನು ಉಳುಮೆಮಾಡುತ್ತಿದ್ದು ಕೃಷಿಗಾಗಿ ಸಾಲ ಮಾಡಿಕೊಂಡಿದ್ದ.
ಸಾಲಬಾಧೆ ತಾಳಲಾರದೇ ಮನನೊಂದು ಮಂಗಳವಾರ ಬೆಳಿಗ್ಗೆ ಮನೆಯಲ್ಲಿಯೇ ವಿಷದಮಾತ್ರೆ ನುಂಗಿದ್ದ. ವಿಷಯ ತಿಳಿದ ಕೂಡಲೇ ಕುಟುಂಬಸ್ಥರು ಧಾವಿಸಿ ಆತನನ್ನು ಗ್ರಾಮಸ್ಥರ ಸಹಾಯದಿಂದ ಚಿಕಿತ್ಸೆಗಾಗಿ ಅದೇ ಗ್ರಾಮದ ಸರಕಾರಿ ಆಸ್ಪತ್ರೆಗೆ ತಂದಿದ್ದರು.
ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕಳುಹಿಸಿದ್ದರು.ಆದರೆ ಚಿಕಿತ್ಸೆ ಫಲಕಾರಿಯಾಗದೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ರಾತ್ರಿ ಮಹಾಂತೇಶ್ ಕೊನೆಉಸಿರೇಳೆದಿದ್ದಾನೆ ಎಂದು ತಿಳಿದಿದೆ.
ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಮುಂದುವರೆದಿದೆ.
Kshetra Samachara
29/06/2022 11:50 am