ಹುಬ್ಬಳ್ಳಿ:ಹುಬ್ಬಳ್ಳಿಯ ಸುತಗಟ್ಟಿ ಬಳಿ ಕೆಎಸ್ಆರ್‌ಪಿ ಪೊಲೀಸ್ ಸಿಬ್ಬಂದಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಇಸ್ಮಾಯಿಲ್ ಕಿಲ್ಲೇದಾರ್ ಮೃತ ಪಟ್ಟಿರುವ ಕೆಎಸ್ಆರ್‌ಪಿ ಸಿಬ್ಬಂದಿಯಾಗಿದ್ದು ಆರ್‌ಟಿಒ ಸುತಗಟ್ಟಿ ರಸ್ತೆಯಲ್ಲಿ ರಾತ್ರಿ 9.30ಕ್ಕೆ ಘಟನೆ ನಡೆದಿದೆ ಎಂಬ ಮಾಹಿತಿ ಇದೆ.
ಇನ್ನು ಮೃತಪಟ್ಟಿರುವ ಇಸ್ಮಾಯಿಲ್ ಕಿಲ್ಲೆದಾರ 56 ವರ್ಷ ವಯಸ್ಸಿನ ವ್ಯಕ್ತಿಯಾಗಿದ್ದು ಇತ್ತೀಚಿಗೆ 2ನೇ ಮದುವೆ ಆಗಿದ್ದ ಎಂದು ತಿಳಿದು ಬಂದಿದೆ. ಮೊದಲ ಹೆಂಡತಿ ತೀರಿ ಹೋಗಿದ್ದರಿಂದ ಎರಡನೆ ಮದುವೆ ಆಗಿದ್ದ ಎಂದು ಸಂಬಂಧಿಕರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಎಸಿಪಿ ವಿನೋದ್ ಮುಕ್ತೇದಾರ್, ಡಿಸಿಪಿ ಸಾಹಿಲ್ ಬಾಗ್ಲ ಬೇಟಿ ನೀಡಿದ್ದು, ಶವವನ್ನ ಮರಣೋತ್ತರ ಪರೀಕ್ಷೆಗಾಗಿ ಎಸ್‌ಡಿಎಂ ಆಸ್ಪತ್ರೆಗೆ ಸಾಗಿಸಲಾಗಿದೆ.
Kshetra Samachara
29/06/2022 09:08 am