ಹುಬ್ಬಳ್ಳಿ: ಬೈಕ್ ವಿಚಾರವಾಗಿ ಸ್ನೇಹಿತರ ನಡುವೆ ಮಾತಿಗೆ ಮಾತು ಬೆಳೆದು ಸಹೋದರರಿಬ್ಬರಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ ಘಟನೆ ಹಳೆ ಹುಬ್ಬಳ್ಳಿಯ ಬುಲ್ಡೋಜರ್ ನಗರದಲ್ಲಿ ನಡೆದಿದೆ.
ಘಟನೆಯಲ್ಲಿ ಬುಲ್ಡೋಜರ್‌ನಗರ ಮದರಸಾ ಬಳಿಯ ನಿವಾಸಿಗಳಾದ ಪೆಟ್ರೋಲ್ ಪಂಪ್‌ನಲ್ಲಿ ಕೆಲಸ ಮಾಡಿಕೊಂಡಿರುವ ಮಹಮದ ಎಸ್ ಮಕಾಂದಾರ ಮತ್ತು ಸೆಂಟ್ರಿಂಗ್ ಕೆಲಸಗಾರ , ಮುನಾವರ ಎಸ್. ಮಕಾಂದಾರ , ಗಾಯಗೊಂಡಿದ್ದಾರೆ.
ಸೆಂಟ್ರಿಂಗ್ ಕೆಲಸ ಮಾಡಿಕೊಂಡಿರುವ ಸ್ನೇಹಿತ ವಸಾದಿಕನು ಬೈಕ್ ಕೊಡುವಂತೆ ಮಕಾಂದರ ಸಹೋದರರಿಗೆ ಕೇಳಿದಾಗ ಅವರು ನಿರಾಕರಿಸಿದ್ದಾರೆ. ಇದರಿಂದ ಸಿಟ್ಟಾಗಿ ತನ್ನ ಸ್ನೇಹಿತರಾದ ಅನ್ವರ , ಖುಲ್ಪದ ಜೊತೆ ಸೇರಿ ಅವರೊಂದಿಗೆ ಜಗಳ ತೆಗೆದಿದ್ದಾನೆ. ಅದು ವಿಕೋಪಕ್ಕೆ ಹೋಗುತ್ತಿದ್ದಂತೆ ಸಾದಿಕನು ತನ್ನ ಬಳಿಯಿದ್ದ ಚಾಕುವಿನಿಂದ ಸಹೋದರರಿಬ್ಬರಿಗೆ ಇರಿದಿದ್ದಾನೆ.
ಗಾಯಗೊಂಡಿದ್ದ ಇಬ್ಬರು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಪರಾರಿಯಾಗಿರುವ ಮೂವರನ್ನು ಪತ್ತೆ ಮಾಡಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಕುರಿತು ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
27/06/2022 11:19 am