ಧಾರವಾಡ: ಧಾರವಾಡದ ಸಪ್ತಾಪುರ, ಬಾರಾಕೊಟ್ರಿ ಹಾಗೂ ಕರ್ನಾಟಕ ವಿಶ್ವವಿದ್ಯಾಲಯ ರಸ್ತೆಯ ನೂರಾರು ವ್ಯಾಪಾರಿಗಳಿಗೆ ಪಂಗ ನಾಮ ಹಾಕಿದ ನಕಲಿ ಫುಡ್ ಲೈಸನ್ಸ್ ಅಧಿಕಾರಿಯ ಕೆಲವೊಂದಿಷ್ಟು ದೃಶ್ಯಾವಳಿಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಮಂಜುನಾಥ ಚೌಹಣ ಎಂಬಾತನೇ ನಕಲಿ ಅಧಿಕಾರಿ ವೇಷದಲ್ಲಿ ಬಂದವನು. ಈತ ಬೇಕರಿ ಅಂಗಡಿಗೆ ಬಂದು ವಿಚಾರಣೆ ನಡೆಸುತ್ತಿದ್ದ ದೃಶ್ಯಾವಳಿಗಳು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಅಸಲಿಗೆ ಈತನಿಗೂ ಎಫ್ಎಸ್ಎಎಐ (ಫುಡ್ ಸೇಫ್ಟಿ ಹಾಗೂ ಸ್ಟ್ಯಾಂಡರ್ಡ್ ಅಥೋರಿಟಿ ಆಫ್ ಇಂಡಿಯಾ) ಕಚೇರಿಗೂ ಸಂಬಂಧವೇ ಇಲ್ಲ. ಆದರೂ ರಾಜಾರೋಷವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹೆಸರು ಹೇಳಿಕೊಂಡು ಪ್ರತಿಯೊಂದು ಅಂಗಡಿಗೂ ತೆರಳಿ ನಿಮ್ಮ ಫುಡ್ ಲೈಸನ್ಸ್ ಎಲ್ಲಿ ತೋರಿಸಿ ಎಂದು ಪಾನಿ ಪುರಿ, ಎಗ್ ರೈಸ್ ಅಂಗಡಿ, ಹೋಟೆಲ್ ಹಾಗೂ ಕಿರಾಣಿ ಅಂಗಡಿಗಳಿಗೆ ತೆರಳಿ ಅವಾಜ್ ಹಾಕಿ ಕಾಯ್ದೆ, ಕಾನೂನು ಹೆಸರಿನಲ್ಲಿ ದರ್ಪ ಮೆರೆಯುತ್ತಿದ್ದಾನೆ. ಅಲ್ಲದೇ, ಪ್ರತಿಯೊಬ್ಬರ ಬಳಿ ಮೂರೂವರೆ ಸಾವಿರ ರೂಪಾಯಿ ಪೀಕುತ್ತಿದ್ದಾನೆ. ಈಗಾಗಲೇ ನೂರಾರು ಜನರಿಗೆ ಈತ ಇದೇ ರೀತಿ ಮೋಸ ಮಾಡಿದ್ದಾನೆ.
Kshetra Samachara
14/06/2022 10:52 pm