ಕಲಘಟಗಿ: ಕಲಘಟಗಿ ಪಟ್ಟಣದ ಮುಂಡಗೋಡ ರಸ್ತೆಯ ಬಳಿ ಜ್ಯೋತಿ ನಗರ ಹೋಗುವ ರಸ್ತೆಯಲ್ಲಿ ಈ ರೀತಿಯಾದ ವಾಮಾಚಾರ ಕಂಡುಬರುತ್ತಿದೆ. ರಸ್ತೆಯಲ್ಲಿ ಮಡಿಕೆ ಹಾಗೂ ಲಿಂಬೆಹಣ್ಣು, ಕುಂಕುಮ, ಎಲೆ ಇನ್ನು ಮುಂತಾದ ಸಾಮಗ್ರಿಗಳಿಂದ ವಾಮಾಚಾರ ಮಾಡುತ್ತಿದ್ದಾರೆ.
ಇದರಿಂದ ಇಲ್ಲಿ ದಿನನಿತ್ಯ ಓಡಾಡುವ ಸಾರ್ವಜನಿಕರಿಗೆ ಹಾಗೂ ಶಾಲಾ ಮಕ್ಕಳಿಗೆ ಭಯದ ವಾತಾವರಣ ಉಂಟಾಗಿದ್ದು ರಸ್ತೆಯಲ್ಲಿ ಓಡಾಡಲು ಹಿಂದೇಟು ಹಾಕುತ್ತಿದ್ದಾರೆ. ಈ ರಸ್ತೆಯಲ್ಲಿ ವಿದ್ಯುತ್ ಲೈಟ್ ಇರದೇ ಇರುವುದರಿಂದ ಈ ಒಂದು ಕೆಲಸಕ್ಕೆ ಸುಲಭವಾಗಿದೆ ಎಂದು ಇಲ್ಲಿಯ ಸಾರ್ವಜನಿಕರು ತಿಳಿಸುತ್ತಿದ್ದಾರೆ.
ಕೂಡಲೇ ಇದರ ಬಗ್ಗೆ ಅಧಿಕಾರಿಗಳು ಗಮನಹರಿಸಿ ಈ ರೀತಿಯಾಗದಂತೆ ತಡೆಯಬೇಕು. ಕಲಘಟಗಿ ಪಟ್ಟಣದಲ್ಲಿ ಇಂತಹ ಕೆಲಸ ಮಾಡುತ್ತಿರುವವರನ್ನು ಹಿಡಿದು ಶಿಕ್ಷೆಗೆ ಒಳಪಡಿಸಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.
ಉದಯ ಗೌಡರ, ಪಬ್ಲಿಕ್ ನೆಕ್ಸ್ಟ್, ಕಲಘಟಗಿ
Kshetra Samachara
11/06/2022 11:43 am