ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಹತ್ತಿ ಕಟ್ಟಿಗೆಯ ರಾಶಿಗೆ ರಾತ್ರೋರಾತ್ರಿ ಬೆಂಕಿ

ನವಲಗುಂದ: ನವಲಗುಂದ ತಾಲ್ಲೂಕಿನ ಗುಮ್ಮಗೋಳ ಗ್ರಾಮದಲ್ಲಿ ತಡರಾತ್ರಿ ಕಿಡಿಗೇಡಿಗಳು ಹತ್ತಿ ಕಟ್ಟಿಗೆಯ ರಾಶಿಗೆ ಬೆಂಕಿ ಹಚ್ಚಿದ್ದಾರೆ ಎಂದು ಹೇಳಲಾಗುತ್ತಿದ್ದು, ಸಂಪೂರ್ಣ ಕಟ್ಟಿಗೆ ಸುಟ್ಟು ಕರಕಲಾಗಿದೆ.

ಗುಮ್ಮಗೋಳ ಗ್ರಾಮದ ನಿಂಗಪ್ಪ ಹೆಬ್ಬಳ್ಳಿ ಎಂಬುವವರ ಮನೆಯ ಹಿತ್ತಲ್ಲಲ್ಲಿ ಇರಿಸಲಾಗಿದ್ದ ಸುಮಾರು ನಾಲ್ಕು ಟ್ಯಾಕ್ಟರ್ ಹತ್ತಿ ಕಟ್ಟಿಗೆಯ ರಾಶಿಗೆ ರಾತ್ರೋರಾತ್ರಿ ಬೆಂಕಿ ಹಚ್ಚಿದ್ದಾರೆ. ವರ್ಷವಿಡಿ ರೈತರು ಹಲವು ಕೆಲಸಗಳಿಗಾಗಿ ಕಟ್ಟಿಗೆ ಉಪಯೋಗಿಸುತ್ತಿದ್ದರು. ಘಟನೆಯಿಂದ ಸಂಪೂರ್ಣ ಕಟ್ಟಿಗೆ ಭೂದಿಯಾಗಿದೆ. ಇದರಿಂದಾಗಿ ರೈತ ತಲೆ ಮೇಲೆ ಕೈ ಇಟ್ಟು ಕೂರುವಂತಾಗಿದೆ. ಘಟನೆ ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Edited By : PublicNext Desk
Kshetra Samachara

Kshetra Samachara

01/06/2022 08:37 am

Cinque Terre

23.17 K

Cinque Terre

0

ಸಂಬಂಧಿತ ಸುದ್ದಿ