ಅಳ್ನಾವರ:ಪಟ್ಟಣದ ಹೃದಯ ಭಾಗ ಆಝಾದ್ ರಸ್ತೆಯಲ್ಲಿರುವ ಸಾಗರ ಗಾವಡೆ ಕಾಂಪ್ಲೆಕ್ಸ್ ನಲ್ಲಿ ನಿನ್ನೆ ರಾತ್ರಿ ಕಳ್ಳತನ ನಡೆದಿದ್ದು,ಕಳ್ಳರು ಬಟ್ಟೆ ಅಂಗಡಿಯೊಂದನ್ನು ಕಳುವು ಮಾಡಿಕೊಂಡು ಎಸ್ಕೇಪ್ ಆಗಿದ್ದಾರೆ. ಸತೀಶ ತಿಗಡೊಳ್ಳಿ ಎಂಬುವವರ ಬಟ್ಟೆ ಅಂಗಡಿಯಲ್ಲಿ ನಿನ್ನೆ ರಾತ್ರಿ ಸುಮಾರು ಎರಡು ಲಕ್ಷ ಮೌಲ್ಯದ ಸೀರೆಗಳು ಕಳ್ಳತನ ವಾಗಿವೆ.
ಸತೀಶ ತಿಗಡೊಳ್ಳಿ ಎಂಬುವವರ ಅಂಗಡಿಯೇ ಕಳ್ಳತನಕ್ಕೆ ಒಳಗಾಗಿದೆ.ಸತೀಶ ಮೂಲತಃ ಲಿಂಗನಮಠ ಗ್ರಾಮದವರು.ಅಳ್ನಾವರದಲ್ಲಿ ಬಟ್ಟೆ ಹೋಲಿಯುವುದರ ಜೊತೆಗೆ ಬಟ್ಟೆ ವ್ಯಾಪಾರಸ್ಥರು ಕೂಡ.ಸತೀಶ್ ಎಂದಿನಂತೆ ಸಂಜೆವರೆಗೂ ಕೆಲಸ ಮಾಡಿ ಲೈಟ್ ಆಫ್ ಮಾಡಿ ಶಟರ್ಸ್ ಕ್ಲೋಸ್ ಮಾಡಿಕೊಂಡು ಮನೆಗೆ ತೆರಳಿದ್ದಾರೆ.ಮುಂಜಾನೆ ಬಂದು ನೋಡುವ ಹೊತ್ತಿಗೆ ಶಟರ್ಸ್ ನ ಕೀಲಿ ಮುರಿದು ಅಂಗಡಿಯಲ್ಲಿದ್ದ ಎರಡು ಲಕ್ಷ ಬೆಲೆ ಬಾಳುವ ಸುಮಾರು 485 ಸೀರೆಗಳ ಜೊತೆಗೆ ಡ್ರಾ ದಲ್ಲಿದ್ದ ನಾಲ್ಕೈದು ಸಾವಿರ ರೂ ಗಳನ್ನು ಸಹ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದಾರೆ.
ಅಳ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಖದೀಮರಿಗೆ ಪಿಎಸ್‌ಐ ಪ್ರವೀಣ್ ನೇಸರಗಿ ತಂಡ ಬಲೆ ಬೀಸಿದೆ.
Kshetra Samachara
28/05/2022 08:45 pm