ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಡ್ಯುಟಿ ಹಾಕಲು ಲಂಚ: ಎಸಿಬಿ ಬಲೆಗೆ ಬಿದ್ದ ಪೊಲೀಸ್ ಸಿಬ್ಬಂದಿ

ಧಾರವಾಡ: ಕೇವಲ 6 ಸಾವಿರ ರೂಪಾಯಿ ಲಂಚದ ಆಸೆಗಾಗಿ ಪೊಲೀಸ್ ಸಿಬ್ಬಂದಿಯೊಬ್ಬ ಜೈಲು ಪಾಲಾದ ಘಟನೆ ಧಾರವಾಡದಲ್ಲಿ ನಡೆದಿದೆ. ರಮೇಶ ಶಾಂತಗೇರಿ ಎಂಬ ಪೊಲೀಸ್ ಸಿಬ್ಬಂದಿ ಕೆಎಸ್ಆರ್‌ಪಿಯ ಧಾರವಾಡ ಜಿಲ್ಲೆಯಲ್ಲಿ ಹೋಮಗಾರ್ಡ್ ಕಮಾಂಡೆಂಟ್ ಡಿಪಾರ್ಟ್‌ಮೆಂಟ್‌ನ ಹೆಡ್ ಕಾನ್‌ ಸ್ಟೇಬಲ್ ಆಗಿದ್ದು, ಡ್ಯುಟಿ ಹಾಕುವ ವಿಷಯದಲ್ಲಿ ಹೋಮ್‌ಗಾರ್ಡ್‌ ಒಬ್ಬರಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಹೀಗೆ ಬೇಡಿಕೆ ಇಟ್ಟಾಗ ಧಾರವಾಡದ ಪೊಲೀಸ್ ಠಾಣೆ ಮುಂದೆಯೇ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಆ ಪೊಲೀಸ್‌ ಸಿಬ್ಬಂದಿಯನ್ನು ಅರೆಸ್ಟ್ ಮಾಡಿದ್ದಾರೆ.

ಅಣ್ಣಿಗೇರಿಯಲ್ಲಿ ಡ್ಯೂಟಿ ಮಾಡುವ ಹೋಮ್‌ಗಾರ್ಡ್‌ ಒಬ್ಬರು ಈ ಪೊಲೀಸ್‌ ಸಿಬ್ಬಂದಿಯ ಕಾರ್ಯವೈಖರಿಯಿಂದ ಬೇಸತ್ತು ಎಸಿಬಿ ಅಧಿಕಾರಿಗಳಿಗೆ ದೂರು ಕೊಟ್ಟಿದ್ದರು. ಇದರ ಪರಿಣಾಮ ಇದೀಗ ಆ ಪೊಲೀಸ್‌ ಸಿಬ್ಬಂದಿಯನ್ನು ಎಸಿಬಿ ಅಧಿಕಾರಿಗಳು ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

23/05/2022 10:15 pm

Cinque Terre

39.95 K

Cinque Terre

6

ಸಂಬಂಧಿತ ಸುದ್ದಿ