ಹುಬ್ಬಳ್ಳಿ: ಸರ್ಕಾರ ಹಸಿವು ಮುಕ್ತ ದೇಶವನ್ನಾಗಿ ಮಾಡಲು ಉಚಿತವಾಗಿ ಪಡಿತರ ಅಕ್ಕಿಯನ್ನು ನೀಡುತ್ತಿದೆ. ಆದರೆ ಇದರಲ್ಲಿ ಸದ್ಬಳಕೆಗಿಂತ ದುರ್ಬಳಕೆಯೇ ಹೆಚ್ಚಾಗಿರುವುದು ನಿಜಕ್ಕೂ ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ.
ಪಡಿತರ ಅಕ್ಕಿಯ ಕಾಳಸಂತೆ ಹೆಚ್ಚಾಗಿದ್ದು, ಉಚಿತವಾಗಿ ಪಡೆದುಕೊಂಡ ಅಕ್ಕಿಯನ್ನು ಮಾರಾಟ ಮಾಡಲು ಸಾರ್ವಜನಿಕರು ಮುಂದಾಗಿದ್ದಾರೆ. ಇತ್ತ ಕಡೆ ಹಣದ ಆಮಿಷ ತೋರಿಸಿ ದಂಧೆಕೋರರು 10ರೂಪಾಯಿಗೆ ಕೆಜಿಯಂತೆ ಅಕ್ಕಿ ಪಡೆದುಕೊಳ್ಳುತ್ತಿದ್ದು, ಹೆಚ್ಚಿನ ಪ್ರಮಾಣದ ಮಾರಾಟ ದಂಧೆ ಹುಬ್ಬಳ್ಳಿಯ ನವನಗರದಲ್ಲಿ ನಡೆದಿದೆ.
ಈಗಾಗಲೇ ಆಟೋ ಹಾಗೂ ಇನ್ನಿತರ ವಾಹನಗಳ ಮೂಲಕ ಆಗಮಿಸುವ ಕಾಳಸಂತೆಯ ವರ್ತಕರು ಅಕ್ಕಿಯನ್ನು ಲೋಡ್ ಮಾಡಿಕೊಂಡು ಹೋಗುತ್ತಿದ್ದಾರೆ. ಸರ್ಕಾರ ಅವಶ್ಯಕತೆಗೆ ಮೀರಿದ ಸೌಲಭ್ಯಗಳಿಂದ ಜನರು ದುರುಪಯೋಗ ಮಾಡಿಕೊಳ್ಳುತ್ತಿರುವುದು ನಿಜಕ್ಕೂ ಚಿಂತಾಜನಕ ಸಂಗತಿಯಾಗಿದೆ.
ಇನ್ನೂ ಈ ಅವ್ಯವಸ್ಥೆಯನ್ನು ಕಂಡಿರುವ ಸಾರ್ವಜನಿಕರು ಮೊಬೈಲ್ ಕ್ಯಾಮೆರಾದಲ್ಲಿ ದೃಶ್ಯಗಳನ್ನು ಸೆರೆ ಹಿಡಿದು ಮಾಧ್ಯಮಕ್ಕೆ ನೀಡಿದ್ದಾರೆ. ಈ ಬಗ್ಗೆ ಸ್ಥಳೀಯ ಆಡಳಿತ ಎಚ್ಚೆತ್ತುಕೊಂಡು ಇಂತಹ ಅಕ್ರಮ ಕಾಳ ದಂಧೆಗೆ ಬ್ರೇಕ್ ಹಾಕಬೇಕಿದೆ.
Kshetra Samachara
14/05/2022 10:17 pm